Coastal Bulletin

ಮಹಾರಾಷ್ಟ್ರ : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆ ಏರಿಕೆಯಾಗುವ ಮಧ್ಯೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ನಿಷೇಧಗೊಳ್ಳಲಿದೆ ಎಂದಿದ್ದಾರೆ.

ಮಹಾರಾಷ್ಟ್ರದ ಅಕೋಲಾದಲ್ಲಿ‌ ಗುರುವಾರ ನಡೆದ ಡಾ.ಪಂಜಾಬ್ ರಾವ್ ದೇಶ್ ಮುಖ್ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗಿಯಾಗಿ‌ ಡಾಕ್ಟರೇಟ್ ಪದವಿ ಸ್ವೀಕರಿಸಿ ನಂತರ ಮಾತನಾಡಿದರು.

"ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಖಾಲಿಯಾಗಲಿದೆ.

ಹೀಗಾಗಿ ದೇಶದಲ್ಲಿ ‌ಪಳೆಯುಳಿಕೆ ಇಂಧನಗಳನ್ನು ನಿಷೇಧಿಸಲಾಗುತ್ತದೆ. ಮಹಾರಾಷ್ಟ್ರ ವಿದರ್ಭ ಜಿಲ್ಲೆಯಲ್ಲಿ ತಯಾರಾಗುವ ಜೈವಿಕ ಎಥೆನಾಲ್ ನ್ನು ವಾಹನಗಳಿಗೆ ಬಳಸಲಾಗುತ್ತಿದೆ.   ಆಳವಾದ ಬಾವಿಯ ನೀರಿನಿಂದ ಹಸಿರು ಹೈಡ್ರೋಜನ್ ತಯಾರಿಸಬಹುದು" ಎಂದು ಹೇಳಿದ್ದಾರೆ.

Leave a Comment