ನವದೆಹಲಿ: ದೆಹಲಿಯ ರೋಹಿಣಿಯಲ್ಲಿ ನಡೆದ ಸಾರ್ವಜನಿಕ ಚುನಾವಣಾ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ವಿರುದ್ಧ ದುರಾಡಳಿತ ಮತ್ತು ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಕಮಲದ ಚಿಹ್ನೆಯ ಮೇಲೆ ಎಷ್ಟು ಬಲವಾಗಿ ಬೆರಳನ್ನು ಒತ್ತಬೇಕೆಂದರೆ ಅದರಿಂದ ಕೇಜ್ರಿವಾಲ್ ಅವರ ‘ಶೀಶ್ ಮಹಲ್’ನ ಗಾಜು ಒಡೆಯಬೇಕು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ 500 ರೂ.ಗೆ ಎಲ್‌ಪಿಜಿ ನೀಡಲಾಗುವುದು. ಹೋಳಿ ಮತ್ತು ದೀಪಾವಳಿಯಂದು ಒಂದು ಸಿಲಿಂಡರ್ ಅನ್ನು ಉಚಿತವಾಗಿ ನೀಡಲಾಗುವುದು. ಬಿಜೆಪಿ ಸರ್ಕಾರ ರಚನೆಯಾದ ನಂತರ, ಪ್ರತಿ ತಿಂಗಳ 5ನೇ ತಾರೀಖಿನ ಪ್ರತಿಯೊಬ್ಬ ಮಹಿಳೆಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ 2,500 ರೂ.ಗಳನ್ನು
ನೀಡಲು ನಾವು ನಿರ್ಧರಿಸಿದ್ದೇವೆ. ನಮ್ಮ ಸರ್ಕಾರ ಪ್ರತಿ ಗರ್ಭಿಣಿ ಮಹಿಳೆಗೆ 21,000 ರೂ.ಗಳನ್ನು ನೀಡುತ್ತದೆ. ಎಲ್‌ಪಿಜಿ ಸಿಲಿಂಡರ್ 500 ರೂ.ಗೆ ಲಭ್ಯವಿರುತ್ತದೆ ಮತ್ತು ದೀಪಾವಳಿ ಮತ್ತು ಹೋಳಿಯಲ್ಲಿ ಒಂದು ಸಿಲಿಂಡರ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.














