ಕಳ್ಳಿಗೆ : ಜ.31, ಶ್ರೀ ಕನಪಾಡಿತ್ತಾಯ, ಧೂಮಾವತಿ-ಬಂಟ ಹಾಗೂ ಪರಿವಾರ ದೈವಗಳ ಧರ್ಮ ನೇಮೋತ್ಸವ.

Coastal Bulletin
ಕಳ್ಳಿಗೆ : ಜ.31, ಶ್ರೀ ಕನಪಾಡಿತ್ತಾಯ, ಧೂಮಾವತಿ-ಬಂಟ ಹಾಗೂ ಪರಿವಾರ ದೈವಗಳ ಧರ್ಮ ನೇಮೋತ್ಸವ.

ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಕಳ್ಳಿಗೆ ಗುತ್ತು ಚಾವಡಿಯಲ್ಲಿ ಶ್ರೀ ಕನಪಾಡಿತ್ತಾಯ, ಧೂಮಾವತಿ-ಬಂಟ ಹಾಗೂ ಪರಿವಾರ ದೈವಗಳ ಧರ್ಮ ನೇಮೋತ್ಸವ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಜ.31ನೇ ಶುಕ್ರವಾರ ನಡೆಯಲಿದೆ.


ಬೆಳಿಗ್ಗೆ ಗಂಟೆ 8-30ಕ್ಕೆ ಪೆರಿಯೋಡಿಬೇಡುವಿನಲ್ಲಿ ಶ್ರೀ ಕನಪಾಡಿತ್ತಾಯ ದೈವಕ್ಕೆ ಹೋಮ ಪಂಚಕಜ್ಜಾಯ, ಪರ್ವಪೂಜೆ,9-00ಕ್ಕೆ ಪೆರಿಯೋಡಿಬೀಡುವಿನಲ್ಲಿ ದೈವಗಳ ಭಂಡಾರ ಹೊರಡುವಿಕೆಯಅನುಜ್ಞಾ ಪ್ರಾರ್ಥನೆ ಬಳಿಕ ದೈವಗಳ ಭಂಡಾರ ಹೊರಡುವುದು.ಬೆಳಿಗ್ಗೆ ಗಂಟೆ 10-30ರಿಂದ ಕಳ್ಳಿಗೆಗುತ್ತು ಚಾವಡಿಯಲ್ಲಿ ಶ್ರೀ ಕನಪಾಡಿತ್ತಾಯ, ಧೂಮಾವಡಿ-ಬಂಟ ಹಾಗೂ ಪರಿವಾರ ದೈವಗಳಿಗೆ ಕಲಶಾಭಿಷೇಕ ಮಧ್ಯಾಹ್ನ ಗಂಟೆ 12-00ಕ್ಕೆ

ಮಹಾಮಾತೆ, ನಂತರ ಪ್ರಸಾದ ವಿತರಣೆ ಗಂಟೆ 12-30ಕ್ಕೆ ಪಲ್ಲಪೂಜೆ ಹಾಗೂ ನಿರಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ.


ಸಂಜೆ ಗಂಟೆ 4-00ರಿಂದ ಕಳ್ಳಿಗೆ ಚಾವಡಿಯಿಂದ ದೈವಗಳ ಭಂಡಾರವು ನೇಮ ಚಪ್ಪರಕ್ಕೆ ಆಗಮಿಸವುದು.ಗಂಟೆ 8ರಿಂದ ದೈವಗಳ ಧರ್ಮನೇಮೋತ್ಸವದ ಗಗ್ಗರ ಸೇವೆ ಜರುಗಲಿದೆ ಫೆ.1ರಿಂದ ಕಳ್ಳಿಗೆಗುತ್ತು ಮನೆಯ ಪರಿವಾರ ದೈವಗಳಿಗೆ ಕೋಲೋತ್ಸವ ನಡೆಯಲಿದೆ.

Leave a Comment