Coastal Bulletin

ಇತ್ತೀಚೆಗೆ ಪರಿಸರ ಮಾಲಿನ್ಯ, ವಾಯು ಮಾಲಿನ್ಯ ಉಂಟುಮಾಡುವ ವಾಹನಗಳು ರಸ್ತೆಯಲ್ಲಿ ಹೆಚ್ಚಾಗಿದೆ ಅಂತಾನೇ ಹೇಳ್ಬಹುದು.ಈ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಸರ್ಕಾರಿ ಬಸ್ಸುಗಳು, ಜೀಪುಗಳು ಸೇರಿದಂತೆ 15 ವರ್ಷಗಳನ್ನು ಪೂರೈಸಿರುವ ಯಾವುದೇ ವಾಹನಗಳಿಗೆ ಏಪ್ರಿಲ್​ 1 ರಿಂದ ಮುಕ್ತಿ ಸಿಗಲಿದೆ ಎಂದು ಹೇಳಿದೆ. ಇದರಲ್ಲೂ 15 ವರ್ಷ ಪೂರೈಸಿದ್ದರೂ ಹೊಸ ರಿಜಿಸ್ಟ್ರೇಷನ್​ ಆಗಿದ್ದರೂ ಯಾವುದೇ ಮುಲಾಜಿಲ್ಲದೇ ರದ್ದಾಗುವುದು ಎಂದು ಸರ್ಕಾರ ಘೋಷಿಸಿದೆ. ಇದಲ್ಲದೆ ಕರ್ನಾಟಕದ ಖಾಸಗಿ ಮತ್ತು ವಾಣಿಜ್ಯ ಬಳಕೆಯ 15 ವರ್ಷಗಳನ್ನು ಪೂರೈಸಿರುವ ವಾಹನಗಳನ್ನು ಈ ನಿಯಮಕ್ಕೆ ಒಳಪಡಿಸುವ ಬದಲು ಮಾಲೀಕರ ಆಯ್ಕೆಗೆ ಬಿಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಕೇಂದ್ರ ಮೋಟಾರು ನಿಯಮಗಳು 2023ರ ಹೊಸ ನಿಯಮ ಜಾರಿ ಬಂದಿದ್ದು, ಈ ಮೂಲಕ ವಿಷಕಾರಿ ಹೊಗೆಯನ್ನು ಹೊರಬಿಟ್ಟು ವಾಯು ಮಾಲಿನ್ಯವನ್ನು ಉಂಟುಮಾಡುವ

ವಾಹನಗಳನ್ನು ಮತ್ತು 15 ವರ್ಷ ಪೂರೈಸಿರುವ ವಾಹನಗಳು ಇನ್ಮುಂದೆ ರಸ್ತೆಗಿಳಿಯುವಂತಿಲ್ಲ. ಈ ನಿಯಮ ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

Leave a Comment