ನವದೆಹಲಿ : ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಪೂನಾವಾಲವನ್ನು ಕರೆದೊಯ್ಯುತ್ತಿದ್ದ ಪೋಲಿಸ್ ವ್ಯಾನ್ ಮೇಲೆ ಉದ್ರಿಕ್ತರಿಂದ ದಾಳಿ ನಡೆದಿದೆ.
ತನ್ನ ಲಿವ್- ಇನ್ ಸಂಗಾತಿಯನ್ನು ಕತ್ತು ಹಿಸುಕಿ ಆಕೆಯ ದೇಹವನ್ನು ಕತ್ತರಿಸಿದ ಅಫ್ತಾಬ್ ನನ್ನು ದೆಹಲಿಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಲಯ ನಡೆಸಿದ ಪಾಲಿಗ್ರಾಫ್ ಪರೀಕ್ಷೆಗೆ ಕರೆದುಕೊಂಡು ಹೋಗಲಾಯಿತು. ಆ ವೇಳೆ ಗುರುಗ್ರಾಮದಿಂದ ಬಂದ 15ಜನರ ತಂಡ ವ್ಯಾನ್ ಮೇಲೆ
ದಾಳಿ ನಡೆಸಿದೆ.
ಶ್ರದ್ಧಾನನ್ನು 35 ತುಂಡಗಳಾಗಿ ಮಾಡಿದ್ದ ಆತನನ್ನು ನಾವು 70 ತುಂಡಗಳಾಗಿ ಕತ್ತರಿಸುತ್ತೇವೆ ಎಂದು ವ್ಯಕ್ತಿಯೊಬ್ಬ ಹೇಳಿದ್ದಾನೆ.
ಪೂನಾವಾಲ ಇನ್ನೊಬ್ಬ ಮಹಿಳೆಗೆ ನೀಡಿದ್ದ ಎನ್ನಲಾದ ಶ್ರದ್ಧಾ ಉಂಗುರ, ಶ್ರದ್ಧಾ ವಾಕರ್ ಮೃತದೇಹವನ್ನು ಕತ್ತರಿಸಲು ಬಳಸಿದ ಆಯುಧವನ್ನು ದೆಹಲಿ ಪೋಲಿಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.















