ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಮಿತ್‌ ಶಾ ಹೇಳಿಕೆ

Coastal Bulletin
ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಮಿತ್‌ ಶಾ ಹೇಳಿಕೆ

ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಭಾಗಿಯಾಗಿದ್ದ ಉಗ್ರ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಲೋಕಸಭೆಗೆ ತಿಳಿಸಿದರು.

ಇಂದು 2 ಆಪರೇಷನ್‌ ಸಿಂಧೂರ (Operation Sindoor) ಚರ್ಚೆ ಮುಂದುವರಿಸಿದ ಅಮಿತ್‌ ಶಾ ಅವರು, ವಿಪಕ್ಷಗಳ ವಿರುದ್ಧ ಅಬ್ಬರಿಸಿ ಬೊಬ್ಬರಿದರು. ʻಆಪರೇಷನ್‌ ಮಹದೇವ್‌ʼ ಕಾರ್ಯಾಚರಣೆ ವೇಳೆ ಶ್ರೀನಗರದ ಡಚಿಗಮ್ ಎನ್‌ಕೌಂಟರ್‌ನಲ್ಲಿ ಉಗ್ರ ಹಾಶಿಮ್‌ ಮೂಸಾ (Hashim Musa) ಮತ್ತು ಇತರ ಇಬ್ಬರು ಉಗ್ರರನ್ನ ಕೊಲ್ಲಲಾಗಿದೆ. ಉಳಿದಿಬ್ಬರು ಕಳೆದ ವರ್ಷ ಸೋನಾಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.

ಸೋಮವಾರ ನಡೆದ ʻಆಪರೇಷನ್‌ ಮಹಾದೇವ್‌ʼ ಬಗ್ಗೆ ವಿವರ ನೀಡಿದ ಶಾ, ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಸುಲೇಮಾನ್‌ ಮೂಸಾ, ಜಿಬ್ರಾನ್‌, ಹಮ್ಜಾ ಅಫ್ಘಾನಿ ಉಗ್ರರನ್ನ ಹತ್ಯೆಗೈಯಲಾಗಿದೆ. ಸುಲೇಮಾನ್ ಲಷ್ಕರ್-ಎ-ತೈಬಾ (LeT) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಉಗ್ರನಾಗಿದ್ದ. ಅಲ್ಲದೇ ಈ

ಮೂವರನ್ನೂ ʻAʼ ಗ್ರೇಡ್‌ನ ಉಗ್ರರು ಎಂದು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್ ಪಾಕಿಸ್ತಾನದ್ದು:

ಸಿಂಧೂರ ಚರ್ಚೆ ವೇಳೆ ಅಬ್ಬರಿಸಿ ಬೊಬ್ಬರಿಸಿದ ಅಮಿತ್‌ ಶಾ, ಉಗ್ರರು ಪಾಕಿಸ್ತಾನಕ್ಕೆ ವಾಪಸ್ ಆಗಲು ನಾವು ಅವಕಾಶ ಕೊಡಲಿಲ್ಲ. ಪಾತಕಿಗಳನ್ನ ಇಲ್ಲಿಯೇ ಕೊಲ್ಲಲಾಗಿದೆ. ಅಲ್ಲದೇ ಪಹಲ್ಗಾಮ್‌ನಲ್ಲಿ ಬಳಸಿದ್ದ ರೈಫಲ್‌ಗಳು, ಹತ್ಯೆಯಾದ ಉಗ್ರನ ಬಳಿ ಸಿಕ್ಕಿದ್ದ ರೈಫಲ್‌ ಒಂದೇ ಅಂತ ಖಚಿತಪಡಿಸಿದ್ದೇವೆ. ನಿನ್ನೆಯೇ ಚಂಡೀಗಢಕ್ಕೆ ವಿಮಾನದಲ್ಲಿ ರೈಫಲ್ ಕಳಿಸಿ ದೃಢಪಡಿಸಿದ್ದೇವೆ. ಪಹಲ್ಗಾಮ್‌ ದಾಳಿಯಲ್ಲಿ ಸಿಕ್ಕಿದ ಗುಂಡು ಮತ್ತು ನಿನ್ನೆ ಚಂಡೀಗಢ ಎಫ್‌ಎಸ್‌ಎಲ್‌ನಲ್ಲಿ ರೈಫಲ್ ಬಳಸಿ ಅದರಿಂದಲೂ ಗುಂಡು ಹಾರಿಸಿ ಖಚಿತಪಡಿಸಿದ್ದೇವೆ. ಈ ಮೂರೂ ರೈಫಲ್‌ಗಳನ್ನ ಬಳಸಿಯೇ ಪಹಲ್ಗಾಮ್‌ನಲ್ಲಿ ದಾಳಿ ಮಾಡಿರೋದು ಖಚಿತವಾಗಿದೆ. ಸತ್ತ ಇಬ್ಬರು ಉಗ್ರರ ಬಳಿ ಪಾಕಿಸ್ತಾನದ ವೋಟರ್ ಐಡಿ ಇತ್ತು. ಅಲ್ಲದೇ ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್ ಪಾಕಿಸ್ತಾನದ್ದೇ ಎಂದು ಇಂಚಿಂಚೂ ಮಾಹಿತಿಯನ್ನ ವಿವರಿಸಿದ್ರು.

Leave a Comment