‘2047ಕ್ಕೆ ವಿಕಸಿತ ಭಾರತ.. ಈ ಮಾತು ನಂಬುವುದೇ ದೊಡ್ಡ ತಪ್ಪು’- ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಶಾಕಿಂಗ್ ಹೇಳಿಕೆ.

Coastal Bulletin
‘2047ಕ್ಕೆ ವಿಕಸಿತ ಭಾರತ.. ಈ ಮಾತು ನಂಬುವುದೇ ದೊಡ್ಡ ತಪ್ಪು’- ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಶಾಕಿಂಗ್ ಹೇಳಿಕೆ.

ದೆಹಲಿ : ಭಾರತದ ಆರ್ಥಿಕ ಅಭಿವೃದ್ಧಿ ಬಗ್ಗೆ ಇರುವ ದೊಡ್ಡ ಪ್ರಚಾರವನ್ನು ಭಾರತ ನಂಬಿದರೆ ಅದು ದೊಡ್ಡ ತಪ್ಪಾಗುತ್ತದೆ. 2047ರೊಳಗೆ ಭಾರತ ಮುಂದುವರಿದ ದೇಶವನ್ನಾಗಿ ಮಾಡುವ ಗುರಿ ಬಗ್ಗೆ ಆಡುವ ಮಾತು ಅಸಂಬದ್ಧ ಎಂದು ಆರ್​ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಭಾರತ ಸೆಮಿಕಂಡಕ್ಟರ್ ಚಿಪ್ ತಯಾರಿಸಲು ಹೊರಟಿದೆ. ಆದರೆ, ಈ ಉದ್ಯಮಕ್ಕೆ ಬೇಕಾಗುವ ಎಂಜಿನಿಯರ್ ಅನ್ನ ನೀಡಬಲ್ಲ ಶಿಕ್ಷಣ ವ್ಯವಸ್ಥೆಯನ್ನು ಉಪೇಕ್ಷಿಸುತ್ತಿದೆ ಎಂದು ರಾಜನ್ ಲೇವಡಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2047ಕ್ಕೆ ವಿಕಸಿತ ಭಾರತ ಆಗಲಿದೆ. ಇನ್ನು 23 ವರ್ಷದಲ್ಲಿ ಭಾರತ ಅಭಿವೃದ್ಧಿ ರಾಷ್ಟ್ರವಾಗುವ ಹಾದಿಯಲ್ಲಿದೆ ಎಂಬ ಹೇಳಿಕೆ ನೀಡಿದ್ದರು. ಈ ಮಾತನ್ನು ಪರೋಕ್ಷವಾಗಿ ತಳ್ಳಿ ಹಾಕಿರುವ ರಘುರಾಮ್ ರಾಜನ್, ಈ ಭರವಸೆಯನ್ನ ನಂಬುವುದೇ ದೊಡ್ಡ ತಪ್ಪು ಎಂದಿದ್ದಾರೆ.2047ಕ್ಕೆ ದೇಶ ಅಭಿವೃದ್ಧಿ ಹೊಂದಲಿದೆ ಅನ್ನೋ ಪ್ರಚೋದನಾತ್ಮಕ ಹೇಳಿಕೆಯನ್ನು ನಂಬುವಾಗ ಎಚ್ಚರವಾಗಿರಬೇಕು ಎಂದು ರಾಜನ್ ಹೇಳಿಕೆ ನೀಡಿದ್ದಾರೆ.

ಭಾರತದ ಆರ್ಥಿಕ ಅಭಿವೃದ್ಧಿ ಬಗ್ಗೆ ದೊಡ್ಡ ಹೈಪ್ ಆಗಿದೆ. ಭಾರತವೇನಾದರೂ ಈ ಹೈಪ್ ನಂಬಿದರೆ ಅದು ದೊಡ್ಡ ತಪ್ಪಾಗುತ್ತದೆ ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಮನ್ ಎಚ್ಚರಿಸಿದ್ದಾರೆ. ಆರ್ಥಿಕ ಅಭಿವೃದ್ಧಿ ಬಗ್ಗೆ ಇರುವ ಅತಿರೇಕದ ಪ್ರಚಾರವನ್ನು ಭಾರತ ನಂಬಿದರೆ ದೊಡ್ಡ ತಪ್ಪಾಗುತ್ತದೆ. ಈ ಹೈಪ್ ವಾಸ್ತವದಲ್ಲಿ ನಿಜವಾಗುವುದನ್ನು ಖಚಿತಪಡಿಸಿಕೊಳ್ಳಬೇಕಾದರೆ ಭಾರತ ಇನ್ನೂ ಹಲವು ವರ್ಷ ಕಾಲ ಶ್ರಮ ಪಡಬೇಕಾಗುತ್ತದೆ ಎಂದೂ ರಾಜನ್ ಹೇಳಿದ್ದಾರೆ.

'ನೀವು ಈ ಹೈಪ್ ನಂಬಬೇಕೆಂದು ರಾಜಕಾರಣಿಗಳು ಬಯಸುತ್ತಾರೆ. ನಾವು ಈ ಆರ್ಥಿಕತೆಯ ಮಟ್ಟವನ್ನು ತಲುಪಿದ್ದೇವೆ ಎಂದು ನಾವು ನಂಬುವುದು ಅವರಿಗೆ ಬೇಕು. ಈ ನಂಬಿಕೆಗೆ ಶರಣಾಗುವುದು ಭಾರತ ಮಾಡುವ ಬಹಳ ದೊಡ್ಡ ತಪ್ಪು,’ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ. 2047ರಲ್ಲಿ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡಲು ಪ್ರಧಾನಿ ಗುರಿ ಇಟ್ಟಿರುವ ನಿರ್ಧಾರವನ್ನು ರಾಜನ್ ಕಟುವಾಗಿ

ಟೀಕಿಸಿದ್ದಾರೆ. ನಿಮ್ಮ ಬಹಳಷ್ಟು ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣವೂ ಇಲ್ಲ. ಶಾಲೆ ತೊರೆಯುತ್ತಿರುವ ಸಂಖ್ಯೆ ಹೆಚ್ಚಿರುವಾಗ ಈ ರೀತಿ ಮಾತುಗಳನ್ನು ಆಡುವುದು ಅಸಂಬದ್ಧ ಎಂದಿದ್ದಾರೆ.

ಮೊದಲು ಶಿಕ್ಷಣ ವ್ಯವಸ್ಥೆ ಸರಿಪಡಿಸಿ

ಸರ್ಕಾರದ ನೀತಿ ಮತ್ತು ಆದ್ಯತೆಗಳನ್ನು ರಘುರಾಮ್ ರಾಜನ್ ಕಟುವಾಗಿ ವಿಮರ್ಶಿಸಿದ್ದಾರೆ. ಸರ್ಕಾರ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಗೆ ನೀಡಲು ಮುಂದಾಗಿರುವ ಸಬ್ಸಿಡಿ ಹಣವು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಇಟ್ಟಿರುವ ಬಜೆಟ್​ಗಿಂತ ಹೆಚ್ಚು. ಇದು ತಪ್ಪಾದ ಆದ್ಯತೆ ಎಂದು ಮಾಜಿ ಆರ್​ಬಿಐ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ.

ಚಿಪ್ ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ದೊಡ್ಡ ಯೋಜನೆಗಳತ್ತ ಸರ್ಕಾರ ತೀರಾ ಮಗ್ನವಾಗಿದೆ. ಆದರೆ, ಈ ಉದ್ಯಮಗಳಿಗೆ ಬೇಕಾದ ಎಂಜಿನಿಯರುಗಳನ್ನು ರೂಪಿಸುವಂತಹ ಶಿಕ್ಷಣ ವ್ಯವಸ್ಥೆ ಬಗ್ಗೆ ಗಮನವೇ ಹರಿಸುತ್ತಿಲ್ಲ. ಭಾರತ ಶ್ರೇಷ್ಣ ದೇಶವಾಗಬೇಕೆಂಬ ಸರ್ಕಾರದ ಹಂಬಲ ನೈಜವಾದುದು. ಆದರೆ, ಹಾಗೆ ಆಗಲು ಏನು ಮಾಡಬೇಕು ಎಂಬುದು ಅದರ ಗಮನದಲ್ಲಿ ಇಲ್ಲ ಎಂದು ರಾಜನ್ ವಿಷಾದಿಸಿದ್ದಾರೆ.

Leave a Comment