ನವದೆಹಲಿ: ರಷ್ಯಾ-ಉಕ್ರೇನ್ ಕದನ ಆರಂಭವಾದ ನಂತರದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ವ್ಯತ್ಯಾಸ ಆಗಿದೆ.
ಮಂಗಳವಾರ ಪೆಟ್ರೋಲ್, ಡೀಸೆಲ್ ಬೆಲೆಯು ದೆಹಲಿಯಲ್ಲಿ ಲೀಟರಿಗೆ ತಲಾ 80 ಪೈಸೆ ಏರಿಕೆಯಾಗಿದ್ದು, ಈ ದರ ಏರಿಕೆಯು ಬುಧವಾರವೂ ಮುಂದುವರಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಲೀಟರ್‌ಗೆ ತಲಾ 80 ಪೈಸೆ ಜಾಸ್ತಿ ಆಗಿದೆ.
ಮಂಗಳವಾರ ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ಲೀಟರ್‌ಗೆ ತಲಾ 84 ಪೈಸೆಯಷ್ಟು ಆಗಿದೆ. ಹೀಗಾಗಿ, ನಿನ್ನೆಯಿಂದ ಲೀಟರ್‌ಗೆ ಒಟ್ಟು 1.64 ರೂಪಾಯಿ ಏರಿಕೆ ಆದಂತಾಗಿದೆ. ಪರಿಷ್ಕರಣೆ ಬಳಿಕ
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 102.26 ರೂಪಾಯಿ ಹಾಗೂ ಡೀಸೆಲ್ ದರವು ಲೀಟರಿಗೆ 86.58 ರೂಪಾಯಿ ಆಗಿದೆ.
ದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 97.01 ಮತ್ತು ಡೀಸೆಲ್ ದರ 88.27 ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ 111.67 ಮತ್ತು ಡೀಸೆಲ್ ದರ 95.85, ಚೆನ್ನೈನಲ್ಲಿ ಪೆಟ್ರೋಲ್ ದರ 102.91, ಡೀಸೆಲ್‌ಗೆ 92.95 ಹಾಗೂ ಕೋಲ್ಕತ್ತದಲ್ಲಿ ಪೆಟ್ರೋಲ್ 106.34 ಮತ್ತು ಡೀಸೆಲ್‌ಗೆ 91.42 ಆಗಿದೆ.














