ಚಂಡೀಗಢ : ಪಂಜಾಬ್ ನ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಶಂಕಿತ ಆರೋಪಿಗಳಾದ ಜಗ್ರೂಪ್ ಸಿಂಗ್ ರೂಪ ಹಾಗೂ ಮನ್ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕುಸ್ಸಾ ಅಮೃತಸರ ಬಳಿ ಪೋಲಿಸರೊಂದಿಗೆ ಬುಧವಾರ ನಡೆದ ಪೈರಿಂಗ್ ನಲ್ಲಿ ಮೃತಪಟ್ಟಿದ್ದಾರೆ.
ಶಂಕಿತ ಆರೋಪಿ ಮನ್ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕುಸ್ಸಾ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪೋಲಿಸರು ಗಾಯಗೊಂಡಿದ್ದಾರೆ. ಈ ವೇಳೆ ಕುಸ್ಸಾ ತೀವ್ರ ಗಾಯಗೊಂಡಿದ್ದು,
ಇಂದು ಸಂಜೆ 4 ಗಂಟೆಗೆ ಅಸುನೀಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಅಲ್ಲದೇ ಮಾಧ್ಯಮವೊಂದರ ಕ್ಯಾಮೆರಾ ಮ್ಯಾನ್ ನ ಬಲಗಾಲಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಇದೆ.
















