Coastal Bulletin

ಪಾಟ್ನಾ : ಪ್ರಧಾನಿ ನರೇಂದ್ರ ಮೋದಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಹಾಗೂ ದೇಶದ್ರೋಹಿ ಚಟುವಟಿಕೆಗಳನ್ನು ಕೈಗೊಳ್ಳಲು ದೇಶದ ವಿವಿಧೆಡೆಯ ಯುವಕರಿಗೆ ತರಬೇತಿ ನೀಡುತ್ತಿದ್ದ ಮಾಜಿ ಪೊಲೀಸ್‌ ಅಧಿಕಾರಿ ಸೇರಿದಂತೆ ಇಬ್ಬರು ಶಂಕಿತ ಉಗ್ರರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಅದರೊಂದಿಗೆ ದೊಡ್ಡ ದಾಳಿಯ ಸಂಚನ್ನು ಮೊಳಕೆಯಲ್ಲೇ ಚಿವುಟಿದಂತಾಗಿದ್ದು, ಅನೇಕ ಕೋಮು ಗಲಭೆಗಳನ್ನೂ ತಡೆದಂತಾಗಿದೆ ಎಂದು ತಿಳಿಸಿದ್ದಾರೆ.

ನರೇಂದ್ರ ಮೋದಿಯವರ ಜು.12ರ ಪಟನಾ ಪ್ರವಾಸದ ಮುನ್ನಾದಿನ ಇವರನ್ನು ಪಟನಾದ ಫಲ್‌ವಾರಿ ಷರೀಫ್‌ ಪ್ರದೇಶದಲ್ಲಿ ಬಂಧಿಸಲಾಗಿದೆ. ಇಬ್ಬರೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ನಂಟು ಹೊಂದಿದ್ದು, ಬಂಧಿತ ಮಾಜಿ ಪೊಲೀಸ್‌ ಅಧಿಕಾರಿಯು ಈ ಹಿಂದೆ ನಿಷೇಧಿತ ಸ್ಟೂಡೆಂಟ್‌ ಇಸ್ಲಾಮಿಕ್‌ ಮೂಮೆಂಟ್‌ ಆಫ್‌ ಇಂಡಿಯಾ (ಸಿಮಿ) ಸಂಘಟನೆಯ ಸದಸ್ಯನಾಗಿದ್ದ. ಇವರು ಸ್ಥಳೀಯರಿಗೆ ಖಡ್ಗ

ಹಾಗೂ ಚಾಕುಗಳನ್ನು ಬಳಸಿ ದಾಳಿ ನಡೆಸಲು ತರಬೇತಿ ನೀಡುತ್ತಿದ್ದರು. 2047ಕ್ಕೆ ಭಾರತವನ್ನು ಇಸ್ಲಾಮಿಕ್‌ ದೇಶವಾಗಿಸುವ ಗುರಿಯನ್ನು ಹೊಂದಿದ್ದರು. ‘2047ರಲ್ಲಿ ಇಸ್ಲಾಮಿಕ್‌ ದೇಶವಾಗಿ ಭಾರತ’ ಎಂಬ ದಾಖಲೆ ಕೂಡ ಇವರ ಬಳಿ ಪತ್ತೆ ಆಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರನ್ನು ಜಾರ್ಖಂಡ್‌ನ ನಿವೃತ್ತ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಜಲಾಲುದ್ದೀನ್‌ ಹಾಗೂ ಅಥರ್‌ ಪರ್ವೇಜ್‌ ಎಂದು ಗುರುತಿಸಲಾಗಿದೆ.

Leave a Comment