Coastal Bulletin

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ನೂತನ ಪದಾಧಿಕಾರಿಗಳ‌ ಪದಗ್ರಹಣ ಕಾರ್ಯಕ್ರಮ ಬಂಟ್ವಾಳದ ಸ್ಪರ್ಶಾಕಲಾಮಂದಿರದಲ್ಲಿ ಜು 16ರಂದು ಶನಿವಾರ ಸಂಜೆ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷ ಚಿತ್ತರಂಚನ್ ಶೆಟ್ಟಿ ಬೊಂಡಾಲ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಪದಪ್ರಧಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಜುನಾಥ ಆಚಾರ್ಯ, ರಮೇಶ್, ಕೆ.ಎನ್.ಗಂಗಾಧರ ಆಳ್ವ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ  ನಿರ್ಗಮಿತ ಅಧ್ಯಕ್ಷ ಶನ್ಫತ್ ಶರೀಫ್ ಅವರು ಚುನಾಯಿತ ನಿಯೋಜಿತ ಅಧ್ಯಕ್ಷ ಚಿತ್ತರಂಚನ್

ಶೆಟ್ಟಿ ಬೊಂಡಾಲ ಮತ್ತು ತಂಡಕ್ಕೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರ್ಗಮಿತ ಅಧ್ಯಕ್ಷ ಶನ್ಫತ್ ಶರೀಫ್, ನೂತನ ಕಾರ್ಯದರ್ಶಿ ಉಮೇಶ್ ಆರ್.ಮೂಲ್ಯ ,ಕಾರ್ಯನಿರ್ವಾಹಕ ಕಾರ್ಯದರ್ಶಿ ಕಿಶೋರ್ ಕುಮಾರ್, ಪ್ರಮುಖರಾದ  ಸುರೇಶ ಸಾಲಿಯಾನ್, ಮನೋಜ್ ಕನಪಾಡಿ, ರೋಶನ್ ರೈ  ಉಸ್ಥಿತರಿದ್ದರು.

Leave a Comment