ಕೊಯಮತ್ತೂರು: ಕೇಂದ್ರ ಸರ್ಕಾರದ " ಭಾರತ್ ಗೌರವ್" ಯೋಜನೆಯಡಿಯಲ್ಲಿ ಭಾರತದ ಮೊದಲ ಖಾಸಗಿ ರೈಲು ಆರಂಭಗೊಂಡಿದೆ.
ಜೂನ್ 14 ರ ಸಂಜೆ ಕೊಯಮತ್ತೂರಿನಲ್ಲಿ ಈ ರೈಲು ಸೇವೆಗೆ ಚಾಲನೆ ಸಿಕ್ಕಿದ್ದು, ಈ ರೈಲು ಕೊಯಮತ್ತೂರು
ಮತ್ತು ಶಿರಡಿ ನಡುವೆ ಸಂಚರಿಸುತ್ತದೆ.
ಖಾಸಗಿ ರೈಲಿನ ದರಗಳು ಭಾರತೀಯ ರೈಲು ವಿಧಿಸುವ ಟಿಕೆಟ್ ದರಗಳಿಗೆ ಸಮನಾಗಿರುತ್ತದೆ ಎಂದು ಹೇಳಲಾಗಿದೆ.
















