ಮುಂಬಯಿ : ಭಾರತದ ಕ್ರಿಕೆಟ್‌ನಲ್ಲಿ ಲವ್ ಬರ್ಡ್ಸ್ ಆದ ಕೆ.ಎಲ್ ರಾಹುಲ್ ಮತ್ತು ಅಥಿಯಾ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಇವರ ಮದುವೆಗೆ ನಟ ಸುನೀಲ್ ಶೆಟ್ಟಿ ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಕೆಲವು ವರ್ಷಗಳಿಂದ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಸಂಬಂಧವು ಮತ್ತಷ್ಟು ಗಟ್ಟಿಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿ ಅನೇಕ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ
ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಹಾಗೂ ಇನ್‌ಫಾರ್ಮ್ ಕ್ರಿಕೆಟರ್
ಕೆ.ಎಲ್ ರಾಹುಲ್ ಇದೇ ವರ್ಷದಲ್ಲಿ ದಕ್ಷಿಣ ಭಾರತದ ಶೈಲಿಯಲ್ಲಿ ಮದುವೆ ಆಗಲಿದ್ದಾರೆ. ಸುನಿಲ್ ಶೆಟ್ಟಿ ಕುಟುಂಬಕ್ಕೆ ಹತ್ತಿರದ ವ್ಯಕ್ತಿಯೊಬ್ಬರ ಮಾಹಿತಿಯಂತೆ ಈಗಾಗಲೇ ಎರಡೂ ಕುಟುಂಬಗಳು ಮದುವೆಗೆ ತಯಾರಿ ನಡೆಸಿವೆಯಂತೆ.
ಎರಡೂ ಕುಟುಂಬಗಳು ಪರಸ್ಪರ ಚೆನ್ನಾಗಿ ತಿಳಿದಿದ್ದು, ಮದುವೆ ಕುರಿತು ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ.














