Coastal Bulletin

ಶಿರಾಡಿ ಸಾಯಿಬಾಬಾ ದರ್ಶನ ಪಡೆಯಲು ತೆರಳುತ್ತಿದ್ದ ಭಕ್ತರ ಐಷಾರಾಮಿ ಬಸ್​ ಮತ್ತು ಟ್ರಕ್​ ನಡುವೆ ಭೀಕರವಾಗಿ ಡಿಕ್ಕಿ ಸಂಭವಿಸಿ 7 ಮಹಿಳೆಯರು ಸೇರಿಂದತೆ 10 ಮಂದಿ ಮೃತಪಟ್ಟಿರುವ ಘಟನೆ ನಾಸಿಕ್​ನ ಸಿನ್ನಾರ್​ ಹೆದ್ದಾರಿಯಲ್ಲಿ ನಡೆದಿದೆ.

ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಬಸ್​ ಹಾಗೂ ಟ್ರಕ್​ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ರಸ್ತೆ ಅಪಘಾತದಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ನಾಸಿಕ್‌ನ ಸಿನ್ನಾರ್ ತೆಹಸಿಲ್‌ನ ಪಥರೆ ಶಿವಾರ್ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐಷಾರಾಮಿ ಬಸ್​ನಲ್ಲಿ 50ಕ್ಕೂ

ಹೆಚ್ಚು ಭಕ್ತರಿದ್ದರು. ಇವರೆಲ್ಲ ಸಾಯಿಬಾಬಾ ದರ್ಶನ ಪಡೆಯಲೆಂದು ದೇವಾಲಯಕ್ಕೆ ಹೊರಟಿರುವ ವೇಳೆ ಡಿಕ್ಕಿ ಸಂಭವಿಸಿದೆ.  ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸಿನ್ನಾರ್​ ಗ್ರಾಮೀಣಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

ಗಾಯಗೊಂಡವರ ಪೈಕಿ 17 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವಾವಿ ಠಾಣಾ ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಒಳಗಾದ ಬಸ್​ ಪುಣೆಯ ಅಂಬೇರಿನಾಥ್​ ಪ್ರದೇಶಕ್ಕೆ ಸೇರಿದ್ದು ಎಂದು ಹೇಳಲಾಗಿದೆ.

Leave a Comment