ಇಂದಿನಿಂದ ಪವಿತ್ರ ಹಬ್ಬ ರಂಜಾನ್ ಆಚರಣೆ, ಒಂದು ತಿಂಗಳು ಸೂರ್ಯೋದಯದಿಂದ ಸೂರ್ಯಸ್ತದವರೆಗೆ ಉಪವಾಸ ಮಾಡಲಿರುವ ಮುಸ್ಲಿಂರು.

Coastal Bulletin
ಇಂದಿನಿಂದ ಪವಿತ್ರ ಹಬ್ಬ ರಂಜಾನ್ ಆಚರಣೆ, ಒಂದು ತಿಂಗಳು ಸೂರ್ಯೋದಯದಿಂದ ಸೂರ್ಯಸ್ತದವರೆಗೆ ಉಪವಾಸ ಮಾಡಲಿರುವ ಮುಸ್ಲಿಂರು.

ಇಂದಿನಿಂದ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ಶುರುವಾಗಿದೆ. ಸೌದಿ ಅರೇಬಿಯಾ ಮತ್ತು ಇತರ ಹಲವಾರು ಮಧ್ಯಪ್ರಾಚ್ಯ ದೇಶಗಳಲ್ಲಿ ಮಾರ್ಚ್ 11ರ ಭಾನುವಾರದಂದು ಅರ್ಧಚಂದ್ರನನ್ನು ನೋಡಿದ ನಂತರ ಸೋಮವಾರವೇ ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಿದೆ. ಸೋಮವಾರದಂದು ಹಲವಾರು ಭಾರತೀಯ ನಗರಗಳಲ್ಲಿ ಅರ್ಧಚಂದ್ರ ಗೋಚರವಾಗಿದ್ದ ಹಿನ್ನೆಲೆಯಲ್ಲಿ ಇಂದಿನಿಂದ (ಮಾರ್ಚ್ 12) ರಂಜಾನ್ ಆರಂಭವಾಗಿದೆ.

ಭಾರತದಲ್ಲಿ ಸೋಮವಾರ ಅರ್ಧಚಂದ್ರನ ದರ್ಶನವಾಗಿತ್ತು. ಹೀಗಾಗಿ, ಭಾರತದಲ್ಲಿ ಇಂದಿನಿಂದ ರಂಜಾನ್ (Ramzan) ಪ್ರಾರಂಭವಾಗಲಿದೆ. ರಂಜಾನ್ ಅರ್ಧಚಂದ್ರಾಕೃತಿ ಹೈದರಾಬಾದ್ ಮತ್ತು ಲಕ್ನೋದಲ್ಲಿ ಕಾಣಿಸಿಕೊಂಡಿದೆ.

ಈ ತಿಂಗಳಲ್ಲಿ, ಪ್ರಪಂಚದಾದ್ಯಂತದ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಉಪವಾಸದ ಅವಧಿಯಲ್ಲಿ ಎರಡು ಮುಖ್ಯ ಊಟಗಳೆಂದರೆ ಸೂರ್ಯಾಸ್ತದ ನಂತರ ತಿನ್ನುವ ಇಫ್ತಾರ್

ಮತ್ತು ಸೂರ್ಯೋದಯಕ್ಕೆ ಮೊದಲು ಸೇವಿಸುವ ಸೆಹ್ರಿ. ಇಫ್ತಾರ್ ಸಮಯಗಳು ಸೂರ್ಯಾಸ್ತದ ಆಧಾರದ ಮೇಲೆ ಪ್ರತಿದಿನವೂ ಬದಲಾಗುತ್ತವೆ. ದೇಶದ ಬೃಹತ್ ಭೌಗೋಳಿಕ ವ್ಯತ್ಯಾಸಗಳಿಂದಾಗಿ ಭಾರತದಲ್ಲಿ ಇಫ್ತಾರ್ ಸಮಯಗಳು ಗಮನಾರ್ಹವಾಗಿ ಬದಲಾಗುತ್ತವೆ. ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿ, ಮುಂಜಾನೆ- ಮುಸ್ಸಂಜೆಯ ಉಪವಾಸವು 12ರಿಂದ 17 ಗಂಟೆಗಳವರೆಗೆ ಇರುತ್ತದೆ.

Leave a Comment