Coastal Bulletin

ಮಾರ್ಚ್​ 10ರಂದು ಗ್ವಾಲಿಯರ್​ನಲ್ಲಿ ದೇಶದ ಮೊಟ್ಟ ಮೊದಲ ಡ್ರೋನ್​ ಶಾಲೆಯು ಆರಂಭಗೊಂಡಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​​ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಈ ಡ್ರೋನ್​ ಶಾಲೆಯನ್ನು ಲೋಕಾರ್ಪಣೆಗೊಳಿಸಿದರು.

ಹೊಸ ಪ್ರಯತ್ನದ ಬಗ್ಗೆ ಇಬ್ಬರೂ ನಾಯಕರು ಮೆಚ್ವುಗೆ ಸೂಚಿಸಿದ್ದಾರೆ. ಈ ರೀತಿಯ ತಂತ್ರಜ್ಞಾನವು  ಮುಂದೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದೆ ಎಂದರು.

ಈ ವಿಚಾರವಾಗಿ ಮಾತನಾಡಿದ ಸಿಎಂ ಚೌಹಾಣ್, ಡ್ರೋನ್ ತಂತ್ರಜ್ಞಾನವು

ಯುವಕರಿಗೆ ವಿಶೇಷವಾಗಿ ಕಲಿಕೆಗೆ ಹೊಸ ಮಾರ್ಗಗಳು ಮತ್ತು ಅವಕಾಶಗಳನ್ನು ತೆರೆಯುತ್ತದೆ. ರಾಜ್ಯದ ಮೊದಲ ಡ್ರೋನ್ ಶಾಲೆಯನ್ನು ಗ್ವಾಲಿಯರ್‌ನಲ್ಲಿ ಉದ್ಘಾಟಿಸಲಾಗಿದೆ. ಈ ಉದ್ಯಮದಲ್ಲಿ ಡ್ರೋನ್‌ಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾದ್ದರಿಂದ ದೊಡ್ಡ ಉದ್ಯೋಗಾವಕಾಶವಿದೆ ಎಂದು ಹೇಳಿದ್ದಾರೆ.

Leave a Comment