Coastal Bulletin

ರಾಯ್ಪುರ: ಛತ್ತೀಸ್‌ಗಢದ ಸುಕ್ಮಾದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ವೇಳೆ ಜವಾನನೊಬ್ಬ ತನ್ನ ಸಹ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ 4 ಯೋಧರು ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ CRPF ಶಿಬಿರವು ಮರೈಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ ಎಂಬುವುದು ಉಲ್ಲೇಖನೀಯ. ಸಿಆರ್‌ಪಿಎಫ್ 50 ಬೆಟಾಲಿಯನ್ ನಡುವೆ ಕೆಲ ವಿಚಾರವಾಗಿ ವಾಗ್ವಾದ ನಡೆದಿದ್ದು, ಈ ಜಗಳ ಗುಂಡು ಹಾರಿಸುವವರೆಗೂ ತಲುಪಿದೆ ಎಂದು ಹೇಳಲಾಗಿದೆ. ಘಟನೆ

ಬಳಿಕ ಅಲ್ಲಲ್ಲಿ ಕೋಲಾಹಲ ಉಂಟಾಗಿದೆ.

ಗುಂಡು ಹಾರಿಸಿದ ಯೋಧನ ಹೆಸರನ್ನು ರಿತೇಶ್ ರಂಜನ್ ಎಂದು ಹೇಳಲಾಗಿದ್ದು, ಹುತಾತ್ಮ ಯೋಧರಾದ ಧಂಜಿ, ರಾಜೀಬ್ ಮಂಡಲ್, ಧರ್ಮೇಂದ್ರ ಕುಮಾರ್ ಮತ್ತು ರಾಜಮಣಿ ಕುಮಾರ್ ಯಾದವ್ ಹಾಗೂ  ಗಾಯಗೊಂಡವರನ್ನು ಧನಂಜಯ್ ಕುಮಾರ್ ಸಿಂಗ್, ರಾಜೀವ್ ಮಂಡಲ್, ಧರ್ಮಾತ್ಮ ಕುಮಾರ್ ಮತ್ತು ಮಲಯ್ ರಂಜನ್ ಮಹಾರಾಣಾ ಎಂದು ಗುರುತಿಸಲಾಗಿದೆ.

Leave a Comment