ನವದೆಹಲಿ, ಮಾರ್ಚ್ 08: ಲೋಕಸಭಾ ಚುನಾವಣೆ 2024ಗೆ ಸಂಬಂಧಿಸಿದಂತೆ ಕಾಂಗ್ರೆಸ್ನಿಂದ ಮೊದಲ ಪಟ್ಟಿ ಫೈನಲ್ ಮಾಡಲಾಗಿದೆ. ದೆಹಲಿಯಲ್ಲಿ ನಡೆದ ಸಭೆ ಬಳಿಕ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಲೋಕಸಭಾ ಚುನಾವಣೆಗೆ (Loksabha Elections 2024) ಟಿಕೆಟ್ ಅಂತಿಮಗೊಳಿಸುವ ಸಲುವಾಗಿ ಕಾಂಗ್ರೆಸ್ ನಿರಂತರವಾಗಿ ಸಭೆ ನಡೆಸಿತ್ತು. ಶುಕ್ರವಾರ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೇಪಾಲ್, ಅಜಯ್ ಮಕೇನ್, ಪವನ್ ಖೇರಾ ಅವರು ಸುದ್ದಿಗೋಷ್ಠಿ ನಡೆಸಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು.
ಅಂತಿಮಗೊಂಡ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯಲ್ಲಿ 15 ಸಾಮಾನ್ಯ ವರ್ಗ ಮತ್ತು 24 ಎಸ್ಸಿ, ಎಸ್ಟಿ, ಓಬಿಸಿ ವರ್ಗದ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಕರ್ನಾಟಕದ 7 ಕ್ಷೇತ್ರಕ್ಕೆ ಟಿಕೆಟ್
ಅಂತಿಮಗೊಂಡಿವೆ.
ಉಳಿದಂತೆ ಕೇರಳದಲ್ಲಿ 15 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಂಡಿದೆ. ಉಳಿದಂತೆ ತೆಲಂಗಾಣದಲ್ಲಿ 4, ಛತ್ತೀಸ್ಗಢದಲ್ಲಿ 6, ಮೇಘಾಲಯದ 2, ಸಿಕ್ಕಿಂ, ತ್ರಿಪುರ ಮತ್ತು ನಾಗಲ್ಯಾಂಡ್ ರಾಜ್ಯಗಳಲ್ಲಿ ತಲಾ ಒಂದು ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿದೆ ಎಂದು ಕೆಸಿ ವೇಣುಗೋಪಾಲ್ ಮಾಹಿತಿ ನೀಡಿದರು.
ಕರ್ನಾಟಕದ 7 ನಾಯಕರಿಗೆ ಟಿಕೆಟ್ ಅಂತಿಮ
ಹಾವೇರಿ : ಅನಂತಸ್ವಾಮಿ ಗಡ್ಡೇವರಮಠ
ತುಮಕೂರು ಮುದ್ದ ಹನುಮೇಗೌಡ,
ಶಿವಮೊಗ್ಗ: ಗೀತಾ ಶಿವ ರಾಜಕುಮಾರ್
ಬೆಂಗಳೂರು ಗ್ರಾಮಾಂತರ :ಡಿಕೆ ಸುರೇಶ್,
ಹಾಸನ : ಶ್ರೇಯಸ್ ಪಾಟೀಲ್
ವಿಜಯಪುರ: ಎಸ್ಆರ್ ಅಲಗೂರು
ಮಂಡ್ಯ: ಸ್ಟಾರ್ ಚಂದ್ರು









