ಲಖಿಂಪುರ್ ನಲ್ಲಿ ನಡೆದ ಘಟನೆಯನ್ನು ಖಂಡಿಸಿದ ವರುಣ್ ಹಾಗೂ ಮೇನಕಾ ಗಾಂಧಿ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ವಜಾ

Coastal Bulletin
ಲಖಿಂಪುರ್ ನಲ್ಲಿ ನಡೆದ ಘಟನೆಯನ್ನು ಖಂಡಿಸಿದ ವರುಣ್ ಹಾಗೂ ಮೇನಕಾ ಗಾಂಧಿ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ವಜಾ

ನವದೆಹಲಿ: ಲಖಿಂಪುರ್ ಖೇರಿ ಘಟನೆಯ ವಿರುದ್ಧ ಮತ್ತು ರೈತರಿಗೆ ಬೆಂಬಲವಾಗಿ ಹಲವಾರು ಸಂದೇಶಗಳನ್ನು ಟ್ವೀಟ್ ಮಾಡಿರುವ ಪಿಲಿಭಿತ್ ನ ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ಪಕ್ಷದ ನೂತನ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ. ಅವರ ತಾಯಿ ಮೇನಕಾ ಗಾಂಧಿ ಅವರನ್ನು ಕೂಡ ಬಿಜೆಪಿ ಉನ್ನತ ಸ್ಥಾನದಿಂದ ವಜಾ ಮಾಡಲಾಗಿದೆ.

ಬಿಜೆಪಿ ಗುರುವಾರ 80 ಸದಸ್ಯರೊಂದಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿತು ಇದರಲ್ಲಿ ಇಬ್ಬರು ಪ್ರಮುಖ ನಾಯಕರಾದ ವರುಣ್ ಗಾಂಧಿ ಮತ್ತು ಮಾಜಿ ಕೇಂದ್ರ ಸಚಿವ ಚೌಧರ್ವ್ ಬಿರೇಂದರ್ ಸಿಂಗ್ ಅವರನ್ನು ಕೈ ಬಿಡಲಾಗಿದೆ ಇವರಿಬ್ಬರೂ ಕೂಡ  ವಿವಾದಾತ್ಮಕ ಕೃಷಿ ಕಾನೂನುಗಳನ್ನು ಟೀಕಿಸಿದ್ದರು.


Leave a Comment