ತಮಿಳುನಾಡು ಬಿಎಸ್‌ಪಿ ಅಧ್ಯಕ್ಷನ ಬರ್ಬರ ಹತ್ಯೆ,6 ಮಂದಿ ತಂಡದ ಕೃತ್ಯ.

Coastal Bulletin
ತಮಿಳುನಾಡು ಬಿಎಸ್‌ಪಿ ಅಧ್ಯಕ್ಷನ ಬರ್ಬರ ಹತ್ಯೆ,6 ಮಂದಿ ತಂಡದ ಕೃತ್ಯ.

ಚೆನ್ನೈ: ಶುಕ್ರವಾರ ತಡರಾತ್ರಿ ಪೆರಂಬೂರ್ ಬಳಿಯ ಸೆಂಬಿಯಂನಲ್ಲಿ ಜನನಿಬಿಡ ಪ್ರದೇಶದಲ್ಲಿ ತಮಿಳುನಾಡು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು 6 ಮಂದಿಯ ತಂಡವು ಕಡಿದು ಹತ್ಯೆ ಮಾಡಿದೆ. ಸ್ನೇಹಿತರ ಜತೆ ಹರಟೆ ಹೊಡೆಯುತ್ತ ನಿಂತಿದ್ದ ಅವರನ್ನು ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಮೂರು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಕುಡುಗೋಲುಗಳಿಂದ ಕಡಿದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಳಿಗೆ ಬೆಚ್ಚಿದ ಸ್ನೇಹಿತರು ಕೂಡ ಪರಾರಿ ಆಗಿದ್ದಾರೆ. ದಾಳಿಕೋರರ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ.

ಆರ್ಮ್‌ ಸ್ಟ್ರಾಂಗ್ ಅವರು ಈ ಹಿಂದೆ ಚೆನ್ನೈ ಕಾರ್ಪೋರೇಷನ್‌ನ ಕೌನ್ಸಿಲರ್ ಆಗಿದ್ದರು. ಪೆರಂಬೂರ್ ಬಳಿ ತಾವು ಕಟ್ಟಿಸುತ್ತಿದ್ದ ಹೊಸ ಕಟ್ಟಡದ ಪರಿಶೀಲನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ. ದಾಳಿಕೋರರಲ್ಲಿ ನಾಲ್ವರು ಪುಡ್ ಡೆಲಿವರಿ ಬಾಯ್‌ಗಳ ವೇಷದಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳ

ಪತ್ತೆಗೆ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.  ಅಲ್ಲದೇ ಆರ್ಮ್‌ಸ್ಟ್ರಾಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಕೊಲೆಯಾದ 52 ವರ್ಷದ ಆರ್ಮ್‌ಸ್ಟ್ರಾಂಗ್ ವಕೀಲಿಕೆಗೆ ಪ್ರಸಿದ್ಧರಾಗಿದ್ದರು. ಉತ್ತರ ಚೆನ್ನೈನಲ್ಲಿ ಬಡ ಜನರಿಗೆ ಸಹಾಯ ಮಾಡುವ ಮೂಲಕ ಜನಾನುರಾಗಿಯಾಗಿದ್ದರು.

Leave a Comment