ಕರ್ನಾಟಕದಿಂದ ಉತ್ತರಾಖಂಡ್​ಗೆ ಚಾರಣಕ್ಕೆ ತೆರಳಿದ್ದ 21 ಜನರ ಪೈಕಿ 9 ಜನ ಸಾವು.

Coastal Bulletin
ಕರ್ನಾಟಕದಿಂದ ಉತ್ತರಾಖಂಡ್​ಗೆ ಚಾರಣಕ್ಕೆ ತೆರಳಿದ್ದ 21 ಜನರ ಪೈಕಿ 9 ಜನ ಸಾವು.

ಬೆಂಗಳೂರು: ಉತ್ತರಾಖಂಡ್​ಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕ ರಾಜ್ಯದ 21 ಜನರ ಪೈಕಿ 9 ಜನರು ಸಾವನ್ನಪ್ಪಿರುವ ಘಟಣೆ ವರದಿಯಾಗಿದೆ. ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ತ್ರ ತಾಲ್ ಟ್ರೆಕ್ಕಿಂಗ್ ವೇಳೆ ಕೆಟ್ಟ ಹವಾಮಾನದಿಂದಾಗಿ 9 ಪ್ರವಾಸಿಗರು ಮೃತಪಟ್ಟಿದ್ದು ಭಾರತೀಯ ವಾಯುಸೇನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿಕೂಲ ಹವಾಮಾನದಲ್ಲಿ ಸಿಲುಕಿದ್ದ 15 ಚಾರಣಿಗರ ಪೈಕಿ ಮೂವರು ಬದುಕುಳಿದಿದ್ದು ಐವರ ಶವ ಸ್ಥಳಾಂತರ ಮಾಡಲಾಗಿದೆ.

ಎತ್ತರದ ಪ್ರದೇಶ ಮತ್ತು ಏರಿಳಿತದ ಭೂಪ್ರದೇಶ ಹಿನ್ನೆಲೆ ಎರಡು ಹಗುರ ತೂಕದ ಚೀತಾ ಹೆಲಿಕಾಪ್ಟರ್‌ಗಳ ಮೂಲಕ ಎತ್ತರದ ನೆಲದಿಂದ ಬೇಸ್ ಕ್ಯಾಂಪ್‌ಗೆ ಮತ್ತು ಮಧ್ಯಮ ಲಿಫ್ಟ್ Mi17 V5 ಹೆಲಿಕಾಪ್ಟರ್‌ಗಳೊಂದಿಗೆ ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ರಕ್ಷಣಾ ಕಾರ್ಯ ನಡೆಸಲಾಯಿತು. ಮೂವರು ಶೆರ್ಪಾಗಳು ಮತ್ತು ನಾಲ್ವರು ಚಾರಣಿಗರ ಪಾರ್ಥಿವ ಶರೀರವನ್ನು ನಾಳೆ ಸ್ಥಳಾಂತರಿಸಲಾಗುವುದು.

ಈ ಘೋರ ದುರಂತದಲ್ಲಿ 9 ಪ್ರವಾಸಿಗರು ಮೃತಪಟ್ಟಿದ್ದಾರೆ. ಮೇ 29 ರಂದು ಒಟ್ಟು 22 ಜನ ಟ್ರಕ್ಕಿಂಗ್ ಆರಂಭಿಸಿದ್ದರು. ಜೂನ್ 7 ಕ್ಕೆ ವಾಪಾಸ್ ಬರಲು ನಿರ್ಧಾರವಾಗಿತ್ತು.

ಸಿಲ್ಲಾ ಕುಷ್ಕಲ್ಯಾಣದಿಂದ ಸಹಸ್ತ್ರತಾಲ್​ಗೆ 35 ಕೀ.ಮೀ ದೂರದ ಟ್ರಕ್ಕಿಂಗ್​ಗೆ ಈ ಟೀಂ ಹೋಗಿತ್ತು. ಕರ್ನಾಟಕದ ಐವರು, ಮಹಾರಾಷ್ಟ್ರದ ಮೂವರು, ಇನ್ನೊಬ್ಬರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇವ್ರನ್ನೊಳಗೊಂಡ ಒಟ್ಟು 9 ಜನರು ಮೃತಪಟ್ಟಿದ್ದಾರೆ. ಈವರೆಗೆ ಐವರ ಮೃತದೇಹಗಳ ಸ್ಥಳಾಂತರ ಮಾಡಲಾಗಿದೆ.

22 ಜನರ ಪೈಕಿ 13 ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಡೆಹ್ರಾಡೂನ್ ಗೆ 8 ಜನ, ಬಟ್ವಾಡಿಗೆ ಮೂವರು, ಸಿಲ್ಲಾ ಗ್ರಾಮಕ್ಕೆ ಇಬ್ಬರು ಸೇರಿ ಒಟ್ಟು 13 ಪ್ರವಾಸಿಗರನ್ನ ಭಾರತೀಯ ವಾಯುಸೇನೆ ಹಾಗೂ SDRF ರಕ್ಷಣೆ ಮಾಡಿದೆ.

Leave a Comment