ತುಂಬೆ :ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ.

Coastal Bulletin
ತುಂಬೆ :ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ.

ಬಂಟ್ವಾಳ :ಶಾಲೆ-ಕಾಲೇಜುಗಳಲ್ಲಿ ಮಕ್ಕಳನ್ನು ಸೇರಿಸಿಕೊಂಡು ವಿಶ್ವ ಪರಿಸರ ದಿನಾಚರಣೆಯನ್ನು ಪರಿಸರ ಸ್ವಚ್ಚಗೊಳಿಸುವುದರ ಮೂಲಕ ಹಾಗೂ ಗಿಡ ನೆಡುವುದರ ಮೂಲಕ ಆಚರಿಸುವುದರಿಂದ ಮುಂದಿನ ಜನಾಂಗವೆನಿಸುವ ಮಕ್ಕಳಲ್ಲಿ, ಪರಿಸರ ಪ್ರೇಮ ಮತ್ತು ಪರಿಸರ ಕಾಳಜಿಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಎಂಬುದಾಗಿ ಎಂ.ಇ.ಟಿ. ಆಡಳಿತಾಧಿಕಾರಿ ಕಿಶೋರ್ ಸುವರ್ಣ ಹೇಳಿದರು.

ಅವರು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಮಕ್ಕಳೊಂದಿಗೆ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜೀವಶಾಸ್ತ್ರ ಉಪನ್ಯಾಸಕಿ ನೀತಾಶ್ರೀ ಹಾಗೂ ಗಣಿತಶಾಸ್ತ್ರ ಉಪನ್ಯಾಸಕಿ ಡಯಾನಾ ಡೆತ್ನಿ. ಇವರ ಮಾರ್ಗದರ್ಶನದಲ್ಲಿ ವಿಜ್ಞಾನ ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯೂ ಗಿಡಗಳನ್ನು ತಂದು ನೆಡುವ ಮೂಲಕ ದಿನಾಚರಣಾ ಸಂಭ್ರಮದಲ್ಲಿ ಪಾಲ್ಗೊಂಡರು.

ಉಪನ್ಯಾಸಕರಾದ ಅಬ್ದುಲ್ ರಹಿಮಾನ್ ಡಿ.ಬಿ. ತನ್ನ ಸ್ವಂತ ಉತ್ಸಾಹದಿಂದ ಸಂಸ್ಥೆಗೆ ನಾನಾ ಬಗೆಯ ಗಿಡಗಳನ್ನು

ನೀಡಿದರು. ತುಂಬೆ ಕಾಲೇಜಿನ ಪ್ರಾಂಶುಪಾಲರಾದ ವಿ.ಸುಬ್ರಹ್ಮಣ್ಯ ಭಟ್ ಸಮಾಂಭದ ಅಧ್ಯಕ್ಷತೆ ವಹಿಸಿ ಗಿಡ ನೆಡುವುದರ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ದಿನದ ಮಹತ್ವವನ್ನು ಹೇಳಿ ಜಾಗೃತಿ ಮೂಡಿಸಿದರು.

ಉಪನ್ಯಾಸರಾದ ದಿನೇಶ್ ಶೆಟ್ಟಿ ಅಳಿಕೆ, ಶ್ರೀಮತಿ ಬೇಬಿ, ಡಾ| ವಿಶ್ವನಾಥ್ ಪೂಜಾರಿ, ಕುಮಾರಿ ಅಖಿಲಾ, ಕುಮಾರಿ ಶ್ರೀಪ್ರಜ್ಞಾ, ಹಾಗೂ ಅಶೋಕ್ ಮತ್ತಿತರರು ಉಪಸ್ಥಿತರಿದ್ದ ಸಮಾರಂಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ.ನಾಯಕ್.ಕೆ. ಸಮಗ್ರ ನಿರೂಪಣೆ ಗೈದರು.

Leave a Comment