ಊರ್ವಸ್ಟೋರ್ :ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ನ 'ಪರಿಸರ ಮೈತ್ರಿ' ಯೋಜನೆಗೆ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಚಾಲನೆ.

Coastal Bulletin
ಊರ್ವಸ್ಟೋರ್ :ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ನ 'ಪರಿಸರ ಮೈತ್ರಿ' ಯೋಜನೆಗೆ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಚಾಲನೆ.

ಮಂಗಳೂರು: ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಸಿರು ಸ್ನೇಹವನ್ನು ಬೆಳೆಸುವ ಉದ್ದೇಶದಿಂದ 'ಪರಿಸರ ಮೈತ್ರಿ'ಯ ಯಶಸ್ವಿ ಉದ್ಘಾಟನೆಯು ಜೂನ್ 5ರಂದು ಬುಧವಾರ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮತ್ತು ಉದ್ಘಾಟಕರಾಗಿ ದಕ್ಷಿಣ ಕನ್ನಡದ ನೂತನ ಲೋಕಸಭಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಮಹತ್ವವನ್ನು ಹೇಳಿ ಸಸಿ ನೆಡುವ ಮೂಲಕ ಪರಿಸರ ಮೈತ್ರಿಯ ಪ್ರಾರಂಭವನ್ನು ಸಾಂಕೇತಿಕವಾಗಿ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ನಂದನ್ ಮಲ್ಯ, ಕಾರ್ಪೊರೇಟರ್ ಗಣೇಶ್, ಅಲಂಕಾರ್

ಬಾಬು, ಸಂಸ್ಥೆಯ ಅಧ್ಯಕ್ಷರು ಡಾ.ರಾಘವೇಂದ್ರ ಹೊಳ್ಳ ಹಾಗೂ ಪ್ರಾಂಶುಪಾಲರು ಡಾ. ಮಾಲಿನಿ ಎನ್ ಹೆಬ್ಬಾರ್ ಉಪಸ್ಥಿತರಿದ್ದರು.

ಪರಿಸರ ಮೈತ್ರಿ ಯುವಜನರು, ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಸಮುದಾಯದಲ್ಲಿ ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸಿದೆ. ಈ ಕಾರ್ಯಕ್ರಮ ವಿಶ್ವ ಪರಿಸರ ದಿನದ ಜಾಗತಿಕ ಆಚರಣೆಯೊಂದಿಗೆ ಸಂಯೋಜಿಸಲ್ಪಟ್ಟಿದೆ, ಪರಿಸರ ಸಂರಕ್ಷಣೆ ಮತ್ತು ಹಸಿರು ಜೀವನಕ್ಕೆ ಬದ್ಧತೆಯನ್ನು ಬಲಪಡಿಸುತ್ತದೆ.

Leave a Comment