ಲೋಕಸಭಾ ಚುನಾವಣೆ: ಬಿಜೆಪಿ ನೇತೃತ್ವದ ಎನ್ ಡಿ ಎ ಒಕ್ಕೂಟಕ್ಕೆ ಬಹುಮತ. ಮೂರನೇ ಬಾರಿಗೆ ಮೋದಿಗೆ ಅವಕಾಶ ಮಾಡಿಕೊಟ್ಟ ಜನತೆ.

Coastal Bulletin
ಲೋಕಸಭಾ ಚುನಾವಣೆ: ಬಿಜೆಪಿ ನೇತೃತ್ವದ ಎನ್ ಡಿ ಎ ಒಕ್ಕೂಟಕ್ಕೆ ಬಹುಮತ. ಮೂರನೇ ಬಾರಿಗೆ ಮೋದಿಗೆ ಅವಕಾಶ ಮಾಡಿಕೊಟ್ಟ ಜನತೆ.

ನವದೆಹಲಿ,: ಏಪ್ರಿಲ್‌ 19ರಿಂದ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದು ಇಂದು (ಜೂನ್‌ 4) ಫಲಿತಾಂಶ ಹೊರಬಿದಿದ್ದು. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 292 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ 233 ಹಾಗೂ ಇತರರು 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಇಂಡಿಯಾ ಒಕ್ಕೂಟ ನಡುವಿನ ಸೆಣಸಾಟಕ್ಕೆ ಅಂತಿಮ ತೆರೆ ಇಂದು ಸಿಕ್ಕಿದೆ. ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಮೋದಿ ಮತ್ತೊಮ್ಮ ಪ್ರಧಾನಿ ಗದ್ದುಗೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಶನಿವಾರ ಜೂನ್‌ 01ರಂದು ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್‌ 52 ಸ್ಥಾನಗಳನ್ನು ಪಡೆದಿತ್ತು. ಡಿಎಂಕೆ 24 ಇತರರು 164 ಸ್ಥಾನಗಳನ್ನು ಪಡೆದಿತ್ತು.

ಈ ಜನಾದೇಶದಲ್ಲಿ ಹಲವು ಅಂಶಗಳಿವೆ. 1962 ರ ನಂತರ, ಸರ್ಕಾರವು ತನ್ನ ಎರಡು ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುತ್ತಿರುವುದು ಇದೇ ಮೊದಲು ಹಾಗೂ ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ ಎಂದು ಮೋದಿ ಹೇಳಿದ್ದಾರೆ.

Leave a Comment