ಅತ್ಯಾಚಾರ ಸಂತ್ರಸ್ತೆಗೆ ಬಟ್ಟೆ ಬಿಚ್ಚಿ ಗಾಯ ತೋರಿಸಲು ಹೇಳಿದ ಜಡ್ಜ್! ಕೇಸು ದಾಖಲು.

Coastal Bulletin
ಅತ್ಯಾಚಾರ ಸಂತ್ರಸ್ತೆಗೆ ಬಟ್ಟೆ ಬಿಚ್ಚಿ ಗಾಯ ತೋರಿಸಲು ಹೇಳಿದ ಜಡ್ಜ್! ಕೇಸು ದಾಖಲು.

ಜೈಪುರ: ದಲಿತ ಮಹಿಳೆ ಮೇಲೆ ಸಾಮೂಹಿತ ಅತ್ಯಾಚಾರ ನಡೆದ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ಜಡ್ಜ್ ಮುಂದೆ ಹೇಳಿಕೆ ದಾಖಲಿಸಲು ತೆರಳಿದ ಮಹಿಳೆಗೆ ಆಘಾತವಾಗಿದೆ. ದೇಹದ ಗಾಯದ ಗುರುತು ಪರಿಶೀಲಿಸಲು ಬಟ್ಟೆ ಬಿಚ್ಚಲು ಹೇಳಿದ ಘಟನೆ ರಾಜಸ್ಥಾನದ ಹಿಂದ್ವಾನ್ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಡೆದಿದೆ. ಜಡ್ಜ್ ವಿರುದ್ಧ ಸೆಕ್ಷನ್ 345ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆ ಮೇಲೆ ಹಲ್ಲೆ, ಬೆದರಿಕೆಯೊಡ್ಡಿ ಅತ್ಯಾಚಾರವೆಸಗಿ ಬಳಿಕ ಮಹಿಳೆಯನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಮಾನಸಿಕ, ದೈಹಿಕ ಆಘಾತದಲ್ಲಿರುವ ಈ ದಲಿತ ಮಹಿಳೆ ಧೈರ್ಯ ಮಾಡಿ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾಳೆ.

ಹಿಂದ್ವಾನ್ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ರವೀಂದ್ರ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ. ಸೆಕ್ಷನ್ 345 ಜೊತೆಗೆ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಾಗಿದೆ. ಮಾರ್ಚ್ 30ರಂದು ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಿಂದ್ವಾನಿ ಸಿಟಿ ಆವರಣದಲ್ಲಿನ ದಲಿತ ಮಹಿಳೆ ಮೇಲೆ ಮಾರ್ಚ್ 30ರ ಸಂಜೆ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಕಾಮುಕರು ದಲಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಾರ್ಚ್ 30 ರಾತ್ರಿ ಘಟನೆಯಿಂದ ಕುಗ್ಗಿಹೋದ ದಲಿತ ಮಹಿಳೆ ದೂರು ದಾಖಲಿಸಿದ್ದಾರೆ. ಪ್ರಕರಣ ವಿಚಾರಣೆಯೂ ಆರಂಭಗೊಂಡಿದೆ. ಜಿಲ್ಲಾ

ಮ್ಯಾಜಿಸ್ಟ್ರೇಟ್ ಜಡ್ಜ್ ಮುಂದೆ ಮಹಿಳೆಯ ಹೇಳಿಕೆ ದಾಖಲಿಸಲು ಮಹಿಳೆಗೆ ಸೂಚಿಸಲಾಗಿತ್ತು.

ಜಡ್ಜ್ ಮುಂದೆ ಹೇಳಿಕೆ ದಾಖಲಿಸಿ ಹೊರಬಂದ ಮಹಿಳೆಯನ್ನು ಮತ್ತೆ ಕರೆಸಿಕೊಳ್ಳಲಾಗಿದೆ. ರೇಪ್ ವೇಳೆ ದೇಹದ ಮೇಲೆ ಆಗಿರುವ ಗಾಯವನ್ನು ಪರಿಶೀಲಿಸಬೇಕು ಎಂದು ಜಡ್ಜ್ ಬಟ್ಟೆ ಬಿಚ್ಚಲು ಹೇಳಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ನಾನು ಬಟ್ಟೆ ಬಿಚ್ಚಲು ನಿರಾಕರಿಸಿದೆ. ಮಹಿಳಾ ಸಿಬ್ಬಂದಿಗಳಿದ್ದರೆ ನಾನು ಬಟ್ಟೆ ಬಿಚ್ಚಿ ಗಾಯದ ಗುರುತು ತೋರಿಸುತ್ತಿದ್ದೆ, ಆದರೆ ಜಡ್ಜ್ ಮುಂದೆ ಗಾಯದ ಗುರುತು ತೋರಿಸಲು ನಿರಾಕರಿಸಿದ್ದೇನೆ ಎಂದು ಎಫ್ಐಆರ್‌ನಲ್ಲಿ ಹೇಳಿದ್ದಾರೆ. ಇದೀಗ ಜಡ್ಜ್ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.

Leave a Comment