ಮಂಗಳೂರು:ಜ್ಯುವೆಲ್ಲರಿ ಶಾಪ್ ಗೋಡೆಯನ್ನು ಕೊರೆದು ಬೆಳ್ಳಿಯ ಆಭರಣ ಕಳ್ಳತನ ಮಾಡಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ನಡೆದಿದೆ.
ಇಬ್ರಾಹಿಂ ಎಂಬುವವರ ಮಾಲಿಕತ್ವದ ‘ಗೋಲ್ಡ್ ಕಿಂಗ್’ ಜ್ಯುವೆಲ್ಲರಿಗೆ ನಿನ್ನೆ ರಾತ್ರಿ ದುಷ್ಕರ್ಮಿಗಳು ನುಗ್ಗಿ, ಜುವೆಲ್ಲರಿ ಶಾಪ್’ನ ಎಡಗೋಡೆಯನ್ನು ಕೊರೆದು 10 ಸಾವಿರ ಮೌಲ್ಯದ ಬೆಳ್ಳಿಯ ಆಭರಣವನ್ನು
ಕಳ್ಳತನ ಮಾಡಿದ್ದು ಇಂದು ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಸ್ಥಳಕ್ಕೆ ಬೆರಳಚ್ಚು ಮತ್ತು ಶ್ವಾನದಳವನ್ನು ಕರೆಸಿದ್ದು, ತನಿಖೆಯನ್ನು ಮುಂದುವರೆಸಲಾಗಿದೆ.
















