ಕುಕ್ಕಾಜೆ : ದಯಾ ಕ್ರಿಯೇಷನ್ ಬಾಯಾರು ಇದರ ದ್ವೀತಿಯ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಜ.8 ರಂದು ಸತ್ಯ ನಾರಾಯಣ ಪೂಜೆಯು ಶ್ರೀ ಕ್ಷೇತ್ರ ಕುಕ್ಕಾಜೆಯಲ್ಲಿ ನಡೆಯಲಿದೆ.
ಜ.8 ರ ಬೆಳಗ್ಗೆ 10 ಗಂಟೆಗೆ ಸತ್ಯ ನಾರಾಯಣ ಪೂಜೆ ನಡೆಯಲಿದೆ. ನಂತರ 12.30 ಕ್ಕೆ ಶ್ರೀ ದೇವಿಗೆ ಮಹಾ ಪೂಜೆ ಮತ್ತು ಅನ್ನಸಂತರ್ಪಣೆ ಆಗಲಿದೆ.
ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ಜರಗಲಿದೆ. ಸಂಜೆ 3 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಪರಮಪೂಜ್ಯ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಶ್ರೀ ಕ್ಷೇತ್ರ ಕುಕ್ಕಾಜೆ ಇವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರು
ಶ್ರೀ ಮತಿ ವನಿತಾ ತಾರಿದಾಳ ಇವರು ವಹಿಸಲಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಟಿ.ವಿ 9 ವಿಡಿಯೋ ಜರ್ನಲಿಸ್ಟ್ ಕೆ.ವಿಲ್.ಪ್ರೆಡ್. ಡಿ .ಸೋಜ ಇವರಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಮ್ಮ ಕುಡ್ಲ ಚಾನೆಲ್ ನ ನ್ಯೂಸ್ ರಿಡರ್ ಡಾ.ಪ್ರಿಯ ಹರೀಶ್ , ಕಾಂತಾರ ಖ್ಯಾತಿಯ ಪುಷ್ಪ ರಾಜ್ ಬೊಳತ್ಳಾರ್ , ವಿ.ಟಿ.ವಿಟ್ಲ ದ ರಾಮದಾಸ್ ಶೆಟ್ಟಿ ವಿಟ್ಲ ,ವಿಜಯ ಕುಮಾರ್ ಜೈನ್ ಅಳದಂಗಡಿ ಹೀಗೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.














