Coastal Bulletin

ಕೇರಳ ಸರ್ಕಾರದ ಮೆಗಾ ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ಮೊದಲ ಬಹುಮಾನ ವಿಜೇತ ಆಟೋರಿಕ್ಷಾ ಚಾಲಕ ಅನೂಪ್ ಇದೀಗ ಮಾದ್ಯಮದ ಮೂಲಕ ತನ್ನ ನೋವನ್ನು ಹೇಳಿಕೊಂಡಿದ್ದಾರೆ.

ಲಾಟರಿ ವಿಜೇತನೆಂದು ಘೋಷಿಸಲ್ಪಟ್ಟ ಕೇವಲ ಐದು ದಿನಗಳ ನಂತರ, ಅವರು ನನ್ನ ಜೀವನದಲ್ಲಾದ ಈ ಅನಾಹುತಕ್ಕೆ ವಿಷಾದಿಸುತ್ತೇನೆ ಎಂದು ಹೇಳಿದರು.ಲಾಟರಿ ಗೆದ್ದ ಬಳಿಕ ನಾನು ಎಲ್ಲಾ ಮನಸ್ಸಿನ ಶಾಂತಿಯನ್ನು ಕಳೆದುಕೊಂಡಿದ್ದೇನೆ ಮತ್ತು ನಾನು ನನ್ನ ಸ್ವಂತ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಏಕೆಂದರೆ ನಾನು ಮೊದಲ ಬಹುಮಾನವನ್ನು ಗೆದ್ದಿರುವುದರಿಂದ ಜನ ಹಣ ಕೇಳಿಕೊಂಡು, ಸಾಲ ಕೇಳಿಕೊಂಡು ಬರುತ್ತಿದ್ದಾರೆ.ನಾನು ಬಹುಮಾನವನ್ನು ಗೆಲ್ಲುವವರೆಗೂ ಅನುಭವಿಸಿದ ಎಲ್ಲಾ ಮನಸ್ಸಿನ ಶಾಂತಿಯನ್ನು ಈಗ ಕಳೆದುಕೊಂಡಿದ್ದೇನೆ ಎಂದು ಅನೂಪ್ ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದು,

ತಮ್ಮ ಅಳಲು ತೋಡಿಕೊಂಡಿದ್ದಾರೆ. ಲಾಟರಿ ಗೆದ್ದಾಗ ಬಹಳಷ್ಟು ಸಂತಸವಾಗಿತ್ತು. ಆದರೆ ಆ ಸಂತಸ ಈಗ ದಿನ ಕಳೆದಂತೆ ದುಃಖಕ್ಕೆ ದಾರಿ ಮಾಡಿಕೊಟುತ್ತಿದೆ. ಮನೆಯಿಂದ ಹೊರಗೆ ಕಾಲಿಡಲೂ ಆಗುತ್ತಿಲ್ಲ. ಮಗುವಿಗೆ ಆನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಜನ ಹುಡುಕಿಕೊಂಡು ಬರುತ್ತಾರೆ ಎಂದು ಅನೂಪ್ ಹೇಳಿದ್ದಾರೆ.

ಬಹುಮಾನದ ಹಣ ಇನ್ನೂ ಕೈಸೇರಿಲ್ಲ ಎಂದು ಹೇಳಿದರೂ ಯಾರೂ ನಂಬುವುದಿಲ್ಲ. ಮಾಧ್ಯಮಗಳು ಸಾಕಷ್ಟು ಸುದ್ದಿ ಹಬ್ಬಿಸಿರುವುದರಿಂದ ಎಲ್ಲಿಗೂ ಹೋಗಲೂ ಸಾಧ್ಯವಾಗುತ್ತಿಲ್ಲ. ಈಗ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Leave a Comment