ಮಂಜೇಶ್ವರ:ಬಾಯಾರು ಪೊಸಡಿಗುಂಪೆ ಬಳಿ ಎರಡು ದನಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ.
ನಿನ್ನೆ ರಾತ್ರಿ ಸಮಯದಲ್ಲಿ ಸ್ಥಳೀಯರು ದನಗಳ ಮೃತ ದೇಹವನ್ನು ಕಂಡಿದ್ದು ಮೇಲ್ನೋಟಕ್ಕೆ ದನಗಳನ್ನು ಹೊಡೆದು ಕೊಂದು
ಗುಡ್ಡೆಯ ಬಳಿ ಬಿಸಾಡಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಕೇಸು ದಾಖಲಾದ ಬಗ್ಗೆ ವರದಿಯಾಗಿಲ್ಲ.