Coastal Bulletin

ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು 1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಹಾಗೂ ವಲಸೆ ಕುರಿತಾದ ಕಥೆಯನ್ನು ಹೊಂದಿದೆ. ಅದರಲ್ಲಿ 'ಪಂಡಿತರು ಮತಾಂತರವಾಗಿ, ಕಾಶ್ಮೀರ ಬಿಟ್ಟು ತೆರಳಿ ಇಲ್ಲವೇ ಸಾಯಿರಿ..' ಎಂದು ಭಯೋತ್ಪಾದಕರು ಎಚ್ಚರಿಕೆ ನೀಡಿದ್ದರು. ಅನಿವಾರ್ಯವಾಗಿ ಪಂಡಿತರು ರಾತ್ರೋರಾತ್ರಿ ಅವರ ಮನೆಗಳಿಂದ ಹೊರಬಿದ್ದು ಜಮ್ಮು ಕಡೆಗೆ ತೆರಳಿದರು. ಆ ಸಂದರ್ಭದಲ್ಲಿ ಅನೇಕ ಪಂಡಿತರ ಹತ್ಯೆಯಾಯಿತು. ಇಂತಹ ಅಂಶಗಳನ್ನೇ ಇಟ್ಟುಕೊಂಡು ನೈಜವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಷಿ, ದರ್ಶನ್ ಕುಮಾರ್ ಮುಂತಾದವರು ನಟಿಸಿದ್ದಾರೆ.

ಇದೀಗ ಈ ಚಿತ್ರವು ದಿನಾಂಕ 22/05/2022 ನೇ ಆದಿತ್ಯವಾರ ಸಂಜೆ ಗಂಟೆ 6:30 ಕ್ಕೆ  ಚೇರಾಲು ಶ್ರೀ ಶಾರದಾ ಭಜನ‌ ಮಂದಿರದ ಪರಿಸರದಲ್ಲಿ ಪ್ರದರ್ಶನಗೊಳ್ಳಲಿದೆ.

ದೇಶದಾದ್ಯಂತ ಪ್ರದರ್ಶನಗೊಂಡು ದಾಖಲೆ

ನಿರ್ಮಿಸಿದ ಈ ಚಿತ್ರ ಕಾಶ್ಮೀರಿ ಪಂಡಿತರು ಅನುಭವಿಸಿದ ದೌರ್ಜನ್ಯವನ್ನು ಮತ್ತು ಕಾಶ್ಮೀರದ ನೈಜ ಕಥೆಯನ್ನು ಬಿಚ್ಚಿಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ.ಇದೀಗ ನಮ್ಮೂರಿನಲ್ಲೂ ದಿ ಕಶ್ಮೀರ್ ಫೈಲ್ಸ್ ವೀಕ್ಷಿಸುವ ಅವಕಾಶ.

Leave a Comment