ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ದುರ್ಗಾವಾಹಿನಿ ಪೈವಳಿಕೆ ಖಂಡ ಸಮಿತಿ ವತಿಯಿಂದ ದುರ್ಗಾಷ್ಟಮಿ ಶಸ್ತ್ರ ಪೂಜೆ.

Coastal Bulletin
ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ದುರ್ಗಾವಾಹಿನಿ ಪೈವಳಿಕೆ ಖಂಡ ಸಮಿತಿ ವತಿಯಿಂದ ದುರ್ಗಾಷ್ಟಮಿ ಶಸ್ತ್ರ ಪೂಜೆ.

ಕಾಸರಗೋಡು : ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ದುರ್ಗಾವಾಹಿನಿ ಪೈವಳಿಕೆ ಖಂಡ ಸಮಿತಿ ವತಿಯಿಂದ ದುರ್ಗಾಷ್ಟಮಿ ಶಸ್ತ್ರ ಪೂಜೆ ಶುಕ್ರವಾರ ಪೆರುವೋಡಿಯಲ್ಲಿ ನಡೆಯಿತು.

ಮೀರಾ ಆಳ್ವ ಜಿಲ್ಲಾ ಮಾತೃ ಶಕ್ತಿ ಅಧ್ಯಕ್ಷರು ಇವರು ಕಾರ್ಯಕ್ರಮದ ಬೌದ್ಧಿಕ್ ನಡೆಸಿದರು.


ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ  ಶಂಕರ ಮಾಸ್ಟರ್, ಪ್ರಖಂಡ ಸಂಯೋಜಕ ಆನಂದ್ ,ಭಾಜಪ ತಾ.ಪ ಅಧ್ಯಕ್ಷೆ ಸರೋಜಾ ಆರ್ ಬಲ್ಲಾಳ್, ವಿಶ್ವ ಹಿಂದೂ ಪರಿಷತ್  ಪಂಚಾಯತ್ ಅಧ್ಯಕ್ಷ ಮೋಹನ್ ಬಲ್ಲಾಳ್ ಬಾಯರ್ ಪದವು, ಪಂಚಾಯತ್ ಸಂಯೋಜಕ  ಪ್ರಸಾದ್ ಕೊಜಪ್ಪೆ, ಕಮಲ ಟೀಚರ್,ಚಂದ್ರಾವತಿ ಶೆಟ್ಟಿ ಕುಲ್ಯಾರು, ಗಿರಿಜಾ ಕುಲ್ಯಾರು, ಅರುಣಾ ಬದಿಯಾರು, ಸಂಧ್ಯಾ ಬದಿಯಾರು ಮೊದಲಾದವರು ಉಪಸ್ಥಿತರಿದ್ದರು.

ದುರ್ಗಾಷ್ಟಮಿ ಶಸ್ತ್ರ ಪೂಜೆಯು 14.10.2021 ರ ಗುರುವಾರದ ವರೆಗೆ ವಿವಿಧ ಭಾಗಗಳಲ್ಲಿ ನಡೆಯಲಿರುವುದು.

Leave a Comment