ಕಾಸರಗೋಡು: ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಪ್ಪತ್ತನೇ ವರ್ಷದ ಆಚರಣೆಯ ಅಂಗವಾಗಿ ಕಾಸರಗೋಡಿನ ಶ್ಯಾಮಪ್ರಸಾದ್ ಮುಖರ್ಜಿ ಮಂದಿರ ( ಬಿಜೆಪಿ ಕಾರ್ಯಾಲಯ)ದಲ್ಲಿ ಇತ್ತೀಚೆಗೆ ನಮೋ ಕಾವ್ಯಾಮೃತ ವಿಶೇಷ ಕವಿಗೋ಼ಷ್ಠಿ ಕಾರ್ಯಕ್ರಮ ನಡೆಯಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷ (ಪ್ರಸಕ್ತ ಬಿಜೆಪಿ ರಾಜ್ಯ ಕಾರ್ಯದರ್ಶಿ)ನ್ಯಾಯವಾದಿ ಕೆ. ಶ್ರೀಕಾಂತ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಕವಿಗಳಾದ ರಾಧಾಕೃಷ್ಣ ಉಳಿಯಡ್ಕ ಇವರು ದೀಪ ಬೆಳಗಿಸಿ ಚಾಲನೆ ನೀಡಿದರು. ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ್ ಸುಲಯ ಒಡ್ಡಂಬೆಟ್ಟು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಂಘಟಕರಾದ ಬಾಬುರಾಜ್,ಜಿಲ್ಲಾ ಕಾರ್ಯದರ್ಶಿ ಸವಿತ
ಟೀಚರ್ , ಜಿಲ್ಲಾ ಕಾರ್ಯದರ್ಶಿ ಮನು ಲಾಲ್ ಮೇಲೋತ್, ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಸಂಪತ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಪುಷ್ಪಾ ಗೋಪಾಲನ್ ಉಪಸ್ಥಿತರಿದ್ದರು. ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕವಿಗಳು ಭಾಗವಹಿಸಿ ಪ್ರಧಾನಿಯವರ ಸಾಧನೆಗಳ ಕುರಿತಾದ ಕವನಗಳನ್ನು ವಾಚಿಸಿದರು. ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ತಮ್ಮ ಕವನ ವಾಚಿಸಿ ಎಲ್ಲರ ಗಮನ ಸೆಳೆದರು.















