ದರಿಬಾಗಿಲು-ಜ್ಯೋತಿಗುಡ್ಡೆ ರಸ್ತೆ ಉದ್ಘಾಟನೆ, ಬಂಟ್ವಾಳ ಶಾಸಕರ ಜನಪರ ಕಾಳಜಿಗೆ ಗ್ರಾಮಸ್ಥರಿಂದ ಮೆಚ್ಚುಗೆ

Coastal Bulletin
ದರಿಬಾಗಿಲು-ಜ್ಯೋತಿಗುಡ್ಡೆ ರಸ್ತೆ ಉದ್ಘಾಟನೆ, ಬಂಟ್ವಾಳ ಶಾಸಕರ ಜನಪರ ಕಾಳಜಿಗೆ ಗ್ರಾಮಸ್ಥರಿಂದ ಮೆಚ್ಚುಗೆ

ಬಂಟ್ವಾಳ :ಸುಮಾರು 17 ಲಕ್ಷ ರೂ ಶಾಸಕರ ಅನುದಾನದಲ್ಲಿ ಅಭಿವೃದ್ಧಿ ಹೊಂದಿದ ಕಳ್ಳಿಗೆ ಗ್ರಾಮದ ದರಿಬಾಗಿಲು-ಜ್ಯೋತಿಗುಡ್ಡೆ ಸಂಪರ್ಕ ರಸ್ತೆಯ ಉದ್ಘಾಟನಾ ಕಾರ್ಯಕ್ರಮವು ಬುಧವಾರ ನಡೆಯಿತು,ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಜಾರಂದಗುಡ್ಡೆ ಉದ್ಘಾಟಿಸಿದರು.

ಕಳ್ಳಿಗೆ ಗ್ರಾಮದ ಬಿಜೆಪಿ ಪ್ರಭಾರಿ, ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಿಶೋರ್ ಪಲ್ಲಿಪಾಡಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ,ಧಾರ್ಮಿಕ ಶ್ರದ್ಧಾಕೇಂದ್ರಗಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ಜೊತೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗ್ರಾಮ ಗ್ರಾಮಗಳಲ್ಲಿ ಇಲ್ಲಿಯವರೆಗೂ ಅಭಿವೃದ್ಧಿಯಿಂದ ಮರೀಚಿಕೆ ಹೊಂದಿದ ಹೆಚ್ಚಿನ ರಸ್ತೆಗಳನ್ನು ವಿಶೇಷ ಕಾಳಜಿ ವಹಿಸಿ ಕಾಂಕ್ರೀಟೀಕರಣಗೊಳಿಸಲು ಬಂಟ್ವಾಳ ಶಾಸಕರು ಅನುದಾನ ಒದಗಿಸುತ್ತಿದ್ದಾರೆ. ಈ ಮೂಲಕ ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎಂಬ ಕಲ್ಪನೆಯನ್ನು ಸಾಕಾರಗೊಳಿಸುತ್ತಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ದೂರದೃಷ್ಟಿ ಯೋಜನೆಗಳು ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಳ್ಳಿಗೆ ಪಂಚಾಯತ್ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಪಂಚಾಯತ್ ಸದಸ್ಯರಾದ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಮನೋಜ್ ವಳವೂರು, ಬಂಟ್ವಾಳ ಬಿಜೆಪಿ ಕಾರ್ಯಕಾರಿಣಿ ಸದಸ್ಯ ದೇವಿಪ್ರಸಾದ್ ಎಂ., ಬಂಟ್ವಾಳ ತಾಲೂಕು ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯ ಸಂದೇಶ್ ದರಿಬಾಗಿಲು, ಬಂಟ್ವಾಳ ತಾಲೂಕು ಹಿಂದುಳಿದ ವರ್ಗ ಮೋರ್ಚಾ ಸದಸ್ಯ ಲಕ್ಷ್ಮಣ ಕಂಜತ್ತೂರು, ಅಮ್ಟಾಡಿ ಮಹಾಶಕ್ತಿಕೇಂದ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ್ ಪಚ್ಚಿನಡ್ಕ, ಕಳ್ಳಿಗೆ ಗ್ರಾಮ ಬಿಜೆಪಿ ಸಹಸಂಚಾಲಕ್ ದಿನಕರ ಚಂದ್ರಿಗೆ, ಬ್ರಹ್ಮರಕೂಟ್ಲು ಬೂತ್ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ಕೆ ದರಿಬಾಗಿಲು, ಪಚ್ಚಿನಡ್ಕ ಬೂತ್ ಅಧ್ಯಕ್ಷ ಗ್ಲೆನ್ಸನ್ ಡಿ'ಸೋಜ, ಪ್ರಮುಖರಾದ ಭೋಜ ದರಿಬಾಗಿಲು, ಧೂಮಪ್ಪ ದರಿಬಾಗಿಲು, ಮಾಧವ ವಳವೂರು, ಸತೀಶ್ ಮಾಡಂಗೆ, ರಮೇಶ್ ದರಿಬಾಗಿಲು, ಸೀತಾ ದರಿಬಾಗಿಲು, ಉದಯಕುಮಾರ್ ಜ್ಯೋತಿಗುಡ್ಡೆ, ಲಾವಣ್ಯ ಜ್ಯೋತಿಗುಡ್ಡೆ, ರೂಪೇಶ್ ಜ್ಯೋತಿಗುಡ್ಡೆ, ಮಾಧವ ಅರ್ಬಿ, ಸತೀಶ್ ಬ್ರಹ್ಮರಕೂಟ್ಲು, ನಾಗರಾಜ್ ಮೂರ್ತಿ ಜ್ಯೋತಿಗುಡ್ಡೆ, ಶ್ರೀಕಾಂತ್ ದರಿಬಾಗಿಲು, ಯೋಗೀಶ್ ವಿ.ಕೆ. ದರಿಬಾಗಿಲು, ಪ್ರವೀಣ್ ಜ್ಯೋತಿಗುಡ್ಡೆ, ಯೋಗೀಶ್ ಆಚಾರ್ಯ ಗುಂಡಿಬೆಟ್ಟು, ಗಿರೀಶ್ ಜಾರಂದಗುಡ್ಡೆ, ಉಮಾಶಂಕರ ಜಾರಂದಗುಡ್ಡೆ, ಉದಯ ಜಾರಂದಗುಡ್ಡೆ, ಸಂದೀಪ್ ಬೀಡು, ಗಿರೀಶ್ ದೇವಂದಬೆಟ್ಟು, ವಿಶ್ವನಾಥ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.

Leave a Comment