ಅಫ್ಘಾನಿಸ್ತಾನ: ಐಸಿಸ್-ಕೆ ಉಗ್ರರ ಮೇಲೆ ಅಮೆರಿಕಾ ಡ್ರೋನ್ ದಾಳಿ ಮಾಡಿದೆ. ಐಸಿಸ್ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಮೆರಿಕ ಸೇನೆಯ 13 ಮಂದಿ ಮೃತಪಟ್ಟಿದ್ದು, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಪ್ರತೀಕಾರದ ನುಡಿಗಳನ್ನು ಆಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಯುಎಸ್ ಮಿಲಿಟರಿ ಪಡೆಗಳು ಐಸಿಸ್ ಉಗ್ರರ ವಿರುದ್ಧ ಡ್ರೋನ್ ದಾಳಿ ನಡೆಸಿವೆ.
ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಐಸಿಸ್ ಉಗ್ರರ ಮೇಲೆ ಯುಎಸ್ ಡ್ರೋನ್ ದಾಳಿ ನಡೆಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್‌ನ ವಕ್ತಾರರು ತಿಳಿಸಿದ್ದಾರೆ. ಈ ದಾಳಿಯಲ್ಲಿ
ಯಾವುದೇ ನಾಗರಿಕ ಸಾವುನೋವುಗಳು ಸಂಭವಿಸಿಲ್ಲ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. ಐಸಿಸ್ ಉಗ್ರರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಅಮೆರಿಕ ಈ ನಡೆ ಕೈಗೊಂಡಿದೆ ಎನ್ನಲಾಗಿದೆ.















