ಹಜ್ ಯಾತ್ರೆ: ತಾಪಮಾನದಿಂದ ಸಾವಿನ ಸಂಖ್ಯೆ 1300ಕ್ಕೆ ಏರಿಕೆ,ಸಾವು ನೋವಿಗೆ ನಿಖರ ಕಾರಣ ತಿಳಿಸಿದ ಸೌದಿ ಅರೇಬಿಯಾ.

Coastal Bulletin
ಹಜ್ ಯಾತ್ರೆ: ತಾಪಮಾನದಿಂದ ಸಾವಿನ ಸಂಖ್ಯೆ 1300ಕ್ಕೆ ಏರಿಕೆ,ಸಾವು ನೋವಿಗೆ ನಿಖರ ಕಾರಣ ತಿಳಿಸಿದ ಸೌದಿ ಅರೇಬಿಯಾ.

ಜೆರುಸಲೇಂ: ಮೆಕ್ಕಾದಲ್ಲಿ ಮಿತಿ ಮೀರಿದ ತಾಪಮಾನದಿಂದ ಹಜ್‌ ಯಾತ್ರೆ ಸಂದರ್ಭದಲ್ಲಿ ಮೃತಪಟ್ಟ 1,300ಕ್ಕೂ ಹೆಚ್ಚು ಜನರ ಪೈಕಿ 83% ಜನರು ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರಲಿಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ.

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಬಕ್ರೀದ್ ಮುನ್ನಾದಿನ ಅಥವಾ ‘ದುಲ್ ಹಜ್’ ತಿಂಗಳ ಒಂಬತ್ತರಂದು ಹಜ್ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ.

ದುರದೃಷ್ಟಕರ ಈ ಬಾರಿ ಮೃತರ ಸಂಖ್ಯೆ 1,301ಕ್ಕೆ ಏರಿಕೆಯಾಗಿದೆ. ಈ ಪೈಕಿ 83% ಜನರು ಅನಧಿಕೃತವಾಗಿ ಹಜ್‌ ಯಾತ್ರೆಗೆ ಬಂದಿದ್ದರು. ಅವರಿಗೆ ಸೂರು ಹಾಗೂ ಮೂಲ ಸೌಕರ್ಯ ಸಿಗದ ಕಾರಣ ಬಿಸಿಲಿನಲ್ಲಿ ಬಣಗುವಂತಾಗಿದೆ, ಇದರಿಂದ ಮೃತಪಟ್ಟಿರುವುದಾಗಿ ಸೌದಿ ಅಧಿಕೃತ ಹೇಳಿಕೆ ಪ್ರಕಟಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಅಮೆರಿಕ (USA), ಇಂಡೋನೇಷ್ಯಾ, ಭಾರತ ಸೇರಿದಂತೆ 10ಕ್ಕೂ

ಹೆಚ್ಚು ರಾಷ್ಟ್ರಗಳಿಂದ ಸುಮಾರು 16 ಲಕ್ಷ ಯಾತ್ರಿಕರು ಬಂದಿದ್ದರು. ಈ ವೇಳೆ ಮಿತಿಮೀರಿದ ತಾಪಮಾನ ಏರಿಕೆಯಿಂದ 1,301 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. ಸುಮಾರು 3000 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರ ಪೈಕಿ ಶೇ.83 ಮಂದಿ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರಲಿಲ್ಲ. ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದವರಿಗಷ್ಟೇ ಕೊಠಡಿ ಹಾಗೂ ಮೂಲ ಸೌಕರ್ಯಗಳ ವ್ಯವಸ್ಥೆ ಸಿಗಲಿದೆ ಎಂದು ಹೇಳಲಾಗಿದೆ. ಈ ನಡುವೆ ಅರಬ್ ರಾಜತಾಂತ್ರಿಕರು ಈಜಿಪ್ಟ್‌ನಿಂದ ಬಂದವರಲ್ಲಿ ಕಳೆದವಾರ 658 ಸಾವನ್ನಪ್ಪಿದ್ದಾರೆ. ಅವರಲ್ಲಿ 630 ನೋಂದಾಯಿಸದ ಯಾತ್ರಿಕರು ಎಂದು ಹೇಳಿದ್ದಾರೆ.

ಮೃತರ ಪೈಕಿ 98 ಭಾರತೀಯರು, ತಾಪಮಾನದಿಂದ ಜನರು ಬಳಲುತ್ತಿರುವ ಹಿನ್ನೆಲೆಯಲ್ಲಿ ಹಜ್​ ಯಾತ್ರಿಕರ ವೈದ್ಯಕೀಯ ಆರೈಕೆಗಾಗಿ ಭಾರತದ 365 ವೈದ್ಯರು ಮತ್ತು ಅರೆವೈದ್ಯರನ್ನು ನಿಯೋಜಿಸಲಾಗಿದೆ. ವಿಪರೀತ ಹವಾಮಾನ ವೈಪರೀತ್ಯದ ನಡುವೆಯೇ 2 ಲಕ್ಷ ಒಪಿಡಿಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Leave a Comment