ರಷ್ಯಾದ ಸಂಗೀತ ಕಾರ್ಯಕ್ರಮದ ಸಭಾಂಗಣಕ್ಕೆ ಭೀಕರ ದಾಳಿ ನಡೆಸಿದ ಐಸಿಸ್, ಕನಿಷ್ಠ 100 ಸಾವು.

Coastal Bulletin
ರಷ್ಯಾದ ಸಂಗೀತ ಕಾರ್ಯಕ್ರಮದ ಸಭಾಂಗಣಕ್ಕೆ ಭೀಕರ ದಾಳಿ ನಡೆಸಿದ ಐಸಿಸ್, ಕನಿಷ್ಠ 100 ಸಾವು.

ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆದಿದೆ. ಐವರು ಭಯೋತ್ಪಾದಕರು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ (Concert hall) ನುಗ್ಗಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಕಂಡು ಕೇಳರಿಯದ ಭಾರೀ ಭಯೋತ್ಪಾದನೆ ಇದಾಗಿದ್ದು, ಹತ್ತಾರು ಬಾಂಬುಗಳು ಸ್ಪೋಟಗೊಂಡಿವೆ. ರಷ್ಯಾ ಇದನ್ನು ಭಯೋತ್ಪಾದಕ ಕೃತ್ಯ ಎಂದು ಸಾರಿದೆ.

ಗುಂಡಿನ ದಾಳಿಯಲ್ಲಿ ಭಾರೀ ಸಾವುನೋವು ಸಂಭವಿಸಿದ್ದು ಸದ್ಯಕ್ಕೆ 50 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ 100ರ ಗಡಿ ದಾಟುವ ಅಪಾಯವಿದೆ. ಕಾರ್ಯಕ್ರಮ ನಡೆಯುತ್ತಿದ್ದಾಗ ಸಭಾಂಗಣದ ಒಳಗಡೆಯಿದ್ದ ಮಹಿಳೆಯರು ಮತ್ತು ಮಕ್ಕಳು ಎನ್ನದೆ ಕಂಡಕಂಡವರ ಮೇಲೆ

ಉಗ್ರರು ಗುಂಡಿನ ದಾಳಿ ನಡೆಸಿದ್ದು ಬಾಂಬುಗಳನ್ನು ಎಸೆದಿದ್ದಾರೆ.

ದಾಳಿಯ ಹೊಣೆಹೊತ್ತ ಐಸಿಸ್

ರಷ್ಯಾ ರಾಜಧಾನಿ ಮಾಸ್ಕೋದ ಕನ್ಸರ್ಟ್ ಹಾಲ್‌ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಮಾರ್ಚ್​​ 7ರಂದು ಅಮೆರಿಕವು ಭಯೋತ್ಪಾದಕ ದಾಳಿ ಬಗ್ಗೆ ರಷ್ಯಾವನ್ನು ಎಚ್ಚರಿಸಿತ್ತು.

Leave a Comment