ರಾಜಸ್ಥಾನ : ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಹತ್ಯೆಗೈದ ಆರೋಪಿಗಳ ಪೈಕಿ ಓರ್ವನ ಬೈಕ್ ನೋಂದಣಿ ಸಂಖ್ಯೆ 2611 ಎಂದು ತಿಳಿದು ಬಂದಿದೆ.
ಈ ಬೈಕ್ ಆರೋಪಿ ರಿಯಾಜ್ ಅಖ್ತಾರಿಯ ಬೈಕ್ ಎಂದು ಪೋಲಿಸರು ತಿಳಿಸಿದ್ದಾರೆ.
ಹತ್ಯೆಯ ಸಮಯದಲ್ಲಿ ಉದ್ದೇಶಪೂರ್ವಕವಾಗಿ 26/11 ರ ಮುಂಬೈ ದಾಳಿಯ ದಿನಾಂಕವನ್ನೇ ಹೊಂದಿರುವ
ಬೈಕ್ ನ್ನು ಬಳಸಲಾಗಿದೆ ಎನ್ನಲಾಗಿದೆ. ಈ ವಿಷಯದ ಕುರಿತು ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಮುಂಬೈ ದಾಳಿಯ ಹಿನ್ನೆಲೆಯ ವಿಷಯದಲ್ಲೂ ತನಿಖೆ ನಡೆಸಲಾಗುತ್ತಿದೆ.
















