ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಇದರ 2022-23ನೇ ಸಾಲಿನ ಅಧ್ಯಕ್ಷರಾಗಿ ಮಹಮ್ಮದ್ ಆರಿಫ್ ಹಾಗೂ ಕಾರ್ಯದರ್ಶಿಯಾಗಿ ಅವಿಲ್ ಡಿಸೋಜ ಆಯ್ಕೆಯಾಗಿದ್ದಾರೆ.
ಇತರೆ ಪದಾಧಿಕಾರಿಗಳಾಗಿ ಸುರೇಶ್ ಜೈನ್ ( ಖಜಾಂಚಿ), ಜೆ. ಡಬ್ಲ್ಯೂ. ಪಿಂಟೋ (ನಿಕಟಪೂರ್ವ ಅಧ್ಯಕ್ಷ ), ಪ್ರಸಾದ್ ದೇವಾಡಿಗ (ಸಾಜರ್ಂಟ್ ಎಟ್ ಆಮ್ಸರ್್), ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ನಾಗರಾಜ್ ಬಿ., ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಡಾ. ಮುರಳೀಕೃಷ್ಣ ಆರ್.ವಿ., ಯೂತ್ ಸರ್ವಿಸ್ ನಿರ್ದೆಶಕರಾಗಿ ಶ್ರೀಕಾಂತ ಕಾಮತ್, ಕಮ್ಯೂನಿಟಿ ಸರ್ವಿಸ್ ನಿರ್ದೇಕರಾಗಿ ಜಯರಾಮ ಕೋಟ್ಯಾನ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಮಹಮ್ಮದ್ ಶರೀಫ್, ವೆಬ್ ಕಾರ್ಯದರ್ಶಿಯಾಗಿ ಡಾ. ಆಶೀರ್ವಾದ್, ಜಿಲ್ಲಾ ಯೋಜನೆಗಳ ಚೇರ್ಮನ್ಗಳಾಗಿ ಡಾ.
ಗುರುಪ್ರಸಾದ್ ಅಡಿಗ, ಯತಿಕುಮಾರ್ ಸ್ವಾಮಿ ಗೌಡ, ಪಿ.ಕೆ. ಥೋಮಸ್, ಸಿ.ಎಚ್. ಅಬ್ದುಲ್ ಗಫೂರ್, ನಾರಾಯಣ ಸ್ವಾಮಿ, ನಾರಾಯಣ ಪಿ.ಎಂ., ಮಕ್ಬೂಲ್ ಹುಸೇನ್, ಸನ್ಮತ್, ಡಾ. ವಸಂತ ಟಿ. ಮತ್ತು ರತ್ನಾಕರ ಜೈನ್ ಆಯ್ಕೆಯಾಗಿದ್ದಾರೆ.
ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಪ್ರಕಾಶ್ ಕಾರಂತ್ ನೇತೃತ್ವದ ಈ ಸಾಲಿನ ರೋಟರಿ ಚಟುವಟಿಕೆಯಲ್ಲಿ ಜಲಸಿರಿ,ವನಸಿರಿ, ವಿದ್ಯಾಸಿರಿ, ಆರೋಗ್ಯ ಸಿರಿ ಕುರಿತಾದ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.4ರಂದು ಸಂಜೆ ನಿಶ್ಮಿತಾ ಟವರ್ಸ್ ನ ಪ್ಯಾರಡೈಸ್ ಮಲ್ಟಿಪರ್ಪಸ್ ಹಾಲ್ನಲ್ಲಿ ಜರಗಲಿದೆ.
















