ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿಯವರನ್ನು ಅನಂತ್ ನಾಗ್ ಜಿಲ್ಲೆಗೆ ಹೋಗದಂತೆ, ಅವರನ್ನು ತಡೆದು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಶೋಫಿಯನ್ ನಲ್ಲಿ ದಾಳಿಗೊಳಗಾದ ಕಾಶ್ಮೀರಿ ಪಂಡಿತರನ್ನು ಭೇಟಿಮಾಡಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕೇಂದ್ರ
ಸರ್ಕಾರವು ಕಾಶ್ಮೀರಿ ಪಂಡಿತರ ವಲಸೆ ವಿಷಯದಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿದೆ ಎಂದು ಆರೋಪಿಸಿದ್ದಾರೆ.














