Coastal Bulletin

ಬಂಟ್ವಾಳ :ಕರ್ನಾಟಕ ರಾಜ್ಯ ಕುಂಬಾರರ/ ಕುಲಾಲರ ಯುವ ವೇದಿಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ 2022-24ನೇ ಸಾಲಿನ ಪದ ಪ್ರಧಾನ ಕಾರ್ಯಕ್ರಮವು ಏಪ್ರಿಲ್ 10ರಂದು ಕುಲಾಲ ಸಮುದಾಯ ಭವನ ಪೊಸಳ್ಳಿಯಲ್ಲಿ ನಡೆಯಿತು.

ಬೆಳ್ಳಿಗೆ 8 30ಗೆ ಉಚಿತ ವೈದ್ಯಕೀಯ ಶಿಬಿರವನ್ನು ಡಾ.ಅಣ್ಣಯ್ಯ ಕುಲಾಲ್ ಊಳ್ತುರು ಉದ್ಘಾಟಸಿದರು 

ಪದ ಪ್ರಧಾನ ಸಮಾರಂಭವು ಬೆಳಿಗ್ಗೆ 10 30ಗೆ ನಡೆದು , ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಡಾ. ಕೆ ಜನಾರ್ಧನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಸಂತೋಷ್ ಮರ್ತಾಜೆ ಹಾಗೂ ಕಾರ್ಯದರ್ಶಿ ನಿತೇಶ್ ಕುಲಾಲ್ ಪಲ್ಲಿಕಂಡ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ವೇದಿಕೆಯಲ್ಲಿ ಜಯೇಶ್ ಗೋವಿಂದ್, ನಾಗೇಶ್ ಮರ್ತಾಜೆ,ಲಕ್ಷ್ಮೀ ನಾರಾಯಣ್ ಬಂಟ್ವಾಳ, ನಾರಾಯಣ ಸಿ ಪೆರ್ನೆ,ಭಾರತಿ ಶೇಷಪ್ಪ, ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್ ಪ್ರಾಸ್ತವಿಕವಾಗಿ ಮಾತನಾಡಿ, ಸಂಘದ ಮುಂದಿನ ಯೋಜನೆಯ ಬಗ್ಗೆ ತಿಳಿಸಿದರು.

2022ನೇ ಸಾಲಿನ ವಿವಿಧ ಕ್ಷೇತ್ರಗಳಲ್ಲಿ

ಸಾಧನೆ ಮಾಡಿದ 6 ಜನ ಸಾಧಕರಿಗೆ ಈ ಸಂದರ್ಭದಲ್ಲಿ ಸರ್ವಜ್ಞ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಹಾಗೂ ಅಶಕ್ತ ಬಡ ಕುಟುಂಬಗಳಿಗೆ ಧನ ಸಹಾಯವನ್ನು ನೀಡಲಾಯಿತು.

ಸಂಜೆ ಸಮಾರೋಪ ಸಮಾರಂಭ ನಡೆಯಿತು.

ಮದ್ಯಾಹ್ನ "ಭಕ್ತ ಕುಂಬಾರ"ಭಕ್ತಿ ಪ್ರಧಾನ ಕಿರು ನಾಟಕ ನಡೆದು ,ಮಧ್ಯಾಹ್ನ 3ರಿಂದ ಪ್ರಸಿದ್ದ ಕಲಾವಿದರಿಂದ "ಬಲೇ ತೆಲಿಪಾಲೆ" ಹಾಗೂ ಸಂಜೆ 6ರಿಂದ ಕುಂಭೋದರಿ ಯಕ್ಷ ಬಳಗ ಮತ್ತು ಯುವ ವೇದಿಕೆಯ ಸದಸ್ಯರಿಂದ "ಮೇದಿನಿ ನಿರ್ಮಾಣ, ಮಹಿಷಮರ್ಧಿನಿ" ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡು ಜನಮನ ಸೆಳೆಯಿತು.

ನಿತೇಶ್ ಸ್ವಾಗತಿಸಿದರು.ಹೊನ್ನಯ್ಯ ಕಾಟಿಪಳ್ಳ ಧನ್ಯವಾದವಿತ್ತರು.

ಹೆಚ್ ಕೆ ನೈನಾಡು ಮತ್ತು ರವಿ ಕುಲಾಲ್ ನೇರಂಬೊಲ್ ಕಾರ್ಯಕ್ರಮ ನಿರೂಪಿಸಿದರು.

Leave a Comment