ಫೇಸ್‌ಬುಕ್‌ ,ವಾಟ್ಸಾಪ್, ಇನ್ಸ್ಟಾ ಸರ್ವರ್ ಡೌನ್ ಗ್ರಾಹಕರ ಕ್ಷಮೆ ಕೋರಿದ ಫೇಸ್‌ಬುಕ್‌

Coastal Bulletin
ಫೇಸ್‌ಬುಕ್‌ ,ವಾಟ್ಸಾಪ್, ಇನ್ಸ್ಟಾ ಸರ್ವರ್ ಡೌನ್ ಗ್ರಾಹಕರ ಕ್ಷಮೆ ಕೋರಿದ ಫೇಸ್‌ಬುಕ್‌

ಫೇಸ್‌ಬುಕ್‌ , ವಾಟ್ಸಾಪ್, ಇನ್ಸ್ಟಾ ಮೇಲೆ ಅವಲಂಬಿತವಾಗಿರುವ ಪ್ರಪಂಚದಾದ್ಯಂತದ ಜನರು ಮತ್ತು ವ್ಯವಹಾರಗಳ ಬೃಹತ್ ಸಮುದಾಯಕ್ಕೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಕ್ಷಮೆ ಕೋರಿದೆ ಫೇಸ್‌ಬುಕ್‌. "ನಮ್ಮ ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ಪುನಃಸ್ಥಾಪಿಸಲು ನಾವು ಶ್ರಮಿಸುತ್ತಿದ್ದೇವೆ ಮತ್ತು ಅವರು ಈಗ ಆನ್‌ಲೈನ್‌ಗೆ ಸೇವೆ ಆರಂಭವಾಗಿದೆ ಎಂದು ವರದಿ ಮಾಡಲು ಸಂತೋಷವಾಗಿದೆ. ನಮ್ಮೊಂದಿಗೆ ಸಹಕರಿಸಿದಕ್ಕಾಗಿ ಧನ್ಯವಾದಗಳು" ಎಂದು ಟ್ವೀಟ್ ಮಾಡಿದೆ.

ಫೇಸ್‌ಬುಕ್‌ ಅಧೀನದಲ್ಲಿರುವ ವಾಟ್ಸ್ ಆಪ್ ಹಾಗೂ ಇನಸ್ಟಾಗ್ರಾ ನಿನ್ನೆ ರಾತ್ರಿ 9 ಗಂಟೆಯಿಂದ ಸತತ 6 ಗಂಟೆಗಳ ಕಾಲ ಸರ್ವರ್ ಡೌನ್ ಸಮಸ್ಯೆ ಎದುರಿಸಿತ್ತು.


ಇಂತಹ ದೊಡ್ಡ ಸಮಸ್ಯೆ ನಾವು ಯಾವತ್ತೂ ಎದುರಿಸಿಲ್ಲ ಇದರಿಂದ ಸಾವಿರಾರು ಬಿಲಿಯನ್ ಗಳಲ್ಲಿ ನಷ್ಟ ಕೂಡ ಅನುಭವಿಸಿದ್ದೇವೆ ಎಂದು ಮೂಲಗಳು ತಿಳಿಸಿವೆ.

Leave a Comment