ಯೋಗಿ ರಾಜ್ಯದಲ್ಲಿ ಹಿಂಸಾಚಾರ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಗೃಹ ಬಂಧನ ಖಂಡಿಸಿ ದೇಶದಾದ್ಯಂತ ಆಕ್ರೋಶ, ಪ್ರತಿಭಟನೆ

Coastal Bulletin
ಯೋಗಿ ರಾಜ್ಯದಲ್ಲಿ ಹಿಂಸಾಚಾರ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಗೃಹ ಬಂಧನ ಖಂಡಿಸಿ ದೇಶದಾದ್ಯಂತ ಆಕ್ರೋಶ, ಪ್ರತಿಭಟನೆ

ಲಖಿಂಪುರ್: ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಾಲ್ಕು ರೈತರು ಹಾಗೂ ಇತರರು ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡ ಪರಿಣಾಮ ದೇಶದಾದ್ಯಂತ ಕಾಂಗ್ರೆಸ್ ಹಾಗೂ ರೈತರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಲಖಿಂಪುರ್ ಖೇರಿ ಹಿಂಸಾಚಾರ ವಿರುಧ್ಧ ಪ್ರತಿಭಟನೆ ಗೆ ಮುಂದಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧನದ ವಿರುದ್ಧ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಇತರ ಪಕ್ಷದ ಮುಖಂಡರು ಬೆಂಗಳೂರಿನಲ್ಲಿ ಪಂಜಿನ ಮೆರವಣಿಗೆ ನಡೆಸಿದರು.


ಹಿಂಸಾಚಾರ  ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಜ್ಯ ಸಚಿವ ಆಶಿಶ್ ಮಿಶ್ರಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪ್ರತಿಭಟನೆ ನಡೆಸುತ್ತಿದ್ದಂತೆ ಸಾರಂಗಪುರ ಪೊಲೀಸ್ ಬಂಧಿಸಿ ನಂತರ  ಬಿಡುಗಡೆಗೊಳಿಸಿದರು.

ದೇಶಾದ್ಯಂತ ಪ್ರತಿಭಟನೆಗಳ ನಡುವೆ ಉತ್ತರ ಪ್ರದೇಶ ಸರಕಾರ ಹಿಂಸಾಚಾರದಲ್ಲಿ ಮೃತ ಹಾಗೂ ಘರ್ಷಣೆಯಲ್ಲಿ ಗಾಯಗೊಂಡವರ ಸಂತ್ರಸ್ತರ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿ ಮತ್ತು 10 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು ಎಂದು ಘೋಷಿಸಿದೆ. 

ಬಿಜೆಪಿ ನಾಯಕರು ಪ್ರಕರಣವನ್ನು ಸಿಬಿಐಗೆ ನೀಡುವಂತೆಯೂ ಆಗ್ರಹಿಸಿದ್ದಾರೆ.

Leave a Comment