ಪ್ಯಾರಿಸ್ ಒಲಿಂಪಿಕ್ಸ್‌ 2024: ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಫ್ರಾನ್ಸ್ ಸರಕಾರ.

Coastal Bulletin
ಪ್ಯಾರಿಸ್ ಒಲಿಂಪಿಕ್ಸ್‌ 2024: ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಫ್ರಾನ್ಸ್ ಸರಕಾರ.

ಫ್ರಾನ್ಸ್​​ ಸರ್ಕಾರ ಈ ಭಾರೀ ಪ್ಯಾರಿಸ್ ಒಲಿಂಪಿಕ್ಸ್‌ 2024ರಲ್ಲಿ ಹಿಜಾಬ್​​ ಹಾಕುವುದನ್ನು ನಿಷೇಧಿಸಿದೆ. ಮುಸ್ಲಿಂ ಕ್ರೀಡಾಪಟುಗಳು ಯಾವುದೇ ಕಾರಣಕ್ಕೂ ಹಿಜಾಬ್ ಹಾಕಿಕೊಂಡು ಬರಬಾರದು ಎಂದು ಹೇಳಿದೆ. ಇದರ ಜತೆಗೆ ಕ್ರೀಡಾಪಟುಗಳ ತರಬೇತಿದಾರರೂ ಕೂಡ ಹಿಜಾಬ್​​ ಧರಿಸಿಕೊಂಡು ಒಲಿಂಪಿಕ್ಸ್‌ ಬರದಂತೆ ನಿಷೇಧ ಏರಿದೆ. ಫ್ರೆಂಚ್​ ಸರ್ಕಾರದ ಈ ನಿರ್ಧಾರಕ್ಕೆ ಕ್ರೀಡಾಪಟುಗಳು ಮತ್ತು ಮಾನವ ಹಕ್ಕು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ.

ಈ ಕ್ರಮ ಒಲಿಂಪಿಕ್ ಕ್ರೀಡಾಕೂಟದ ಸ್ವಾತಂತ್ರ್ಯ ಹಾಗೂ ಸಮಾನತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಹಿಜಾಬ್​​​ ನಿಷೇಧದ ಸರ್ಕಾರ ಕ್ರಮವನ್ನು ಫ್ರಾನ್ಸ್​​ ಕ್ರೀಡಾ ಸಚಿವ ಅಮೆಲಿ ಔಡೆಯಾ-ಕ್ಯಾಸ್ಟೆರಾ ಅವರು ಸಮರ್ಥಿಸಿಕೊಂಡಿದ್ದಾರೆ. ಇದು ಸಾರ್ವಜನಿಕ ಸ್ಥಳಗಳಲ್ಲಿ ಜಾತ್ಯತೀತತೆಯನ್ನು ಕಾಪಾಡಿಕೊಳ್ಳಲು ಮತ್ತು ಕ್ರೀಡಾಕೂಟಗಳಲ್ಲಿ ಸಮಾನತೆಯನ್ನು ಕಾಣಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯನ್ ಬಾಕ್ಸರ್ ಟೀನಾ ರಹೀಮಿ ಅವರು ತಮ್ಮ ಎಲ್ಲ ಪಂದ್ಯದ ಸಮಯದಲ್ಲೂ ಹಿಜಾಬ ಧರಿಸಿದ್ದರು. ಇನ್ನು ಫ್ರಾನ್ಸ್​​ ಸರ್ಕಾರ ಈ ಕ್ರಮವನ್ನು ಅವರು ಕೂಡ ವಿರೋಧಿಸಿದ್ದಾರೆ. ನಾನು ನನ್ನ ಧರ್ಮದ ಭಾಗವಾಗಿ ಹಿಜಾಬ್ ಧರಿಸಲು ಆಯ್ಕೆ ಮಾಡುತ್ತೇನೆ. ಹಾಗೆ ಮಾಡಲು ನನಗೆ ಹೆಮ್ಮೆ

ಇದೆ. ಕ್ರೀಡೆಯಲ್ಲಿ ಇಂತಹ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಇನ್ನು ಈ ನಿರ್ಧಾರವನ್ನು ಟೀನಾ ರಹೀಮಿ ಮಾತ್ರವಲ್ಲದೆ ಅನೇಕ ಮುಸ್ಲಿಂ ಕ್ರೀಡಾಪಟುಗಳು ವಿರೋಧಿಸಿದ್ದಾರೆ. ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಮುಖ್ಯ. ಈ ನಿರ್ಧಾರವನ್ನು ಹ್ಯೂಮನ್ ರೈಟ್ಸ್ ವಾಚ್‌ನಂತಹ ಸಂಸ್ಥೆಗಳು ಟೀಕಿಸಿವೆ, ಈ ನಿರ್ಧಾರದಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತದೆ. ಕ್ರೀಡೆಯಲ್ಲಿ ಸಾಮರ್ಥ್ಯವೇ ಹೊರತು ಧಾರ್ಮಿಕ ವಿಚಾರ ಮುಖ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ವಿಶ್ವಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಫ್ರಾನ್ಸ್​​​ ಈ ನಿರ್ಧಾರವನ್ನು ಬೆಂಬಲಿಸಿದೆ. ಈ ನಿಷೇಧವು ತರಬೇತುದಾರರು ಮತ್ತು ತೀರ್ಪುಗಾರರಿಗೂ ಕೂಡ ಅನ್ವಯಿಸುತ್ತದೆ.

Leave a Comment