ಫ್ರಾನ್ಸ್ : ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಮುಖಕ್ಕೆ ಕಪಾಳಮೋಕ್ಷ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಮಾದ್ಯಮವೊಂದು ವರದಿಮಾಡಿದೆ. ಆಗ್ನೇಯ ಫ್ರಾನ್ಸ್‌ನ ಶಾಲೆಗೆ ಮ್ಯಾಕ್ರನ್‌ರ ಭೇಟಿಯ ಸಂದರ್ಭದಲ್ಲಿ ಈ ಕಹಿ ಘಟನೆ
ಸಂಭವಿಸಿದೆ.
ವ್ಯಾಪಕವಾಗಿ ಪ್ರಸಾರವಾದ ವೀಡಿಯೊ ತುಣುಕಿನಲ್ಲಿ ಮುಖವಾಡ ಧರಿಸಿದ್ದ ವ್ಯಕ್ತಿಯು ತನ್ನ ಅಂಗೈಯಿಂದ ಅಧ್ಯಕ್ಷರ ಮುಖಕ್ಕೆ ಕಪಾಳಮೋಕ್ಷ ಮಾಡುವ ಮೊದಲು ಫ್ರೆಂಚ್ ಭಾಷೆಯಲ್ಲಿ "ಡೌನ್ ವಿಥ್ ಮ್ಯಾಕ್ರೋನಿಯಾ" ಎಂದು ಕೂಗುತ್ತಿರುವುದನ್ನು ತೋರಿಸುತ್ತದೆ.















