ಬಿಗ್ ಬಾಸ್ ಕನ್ನಡ ಸೀಸನ್ 11: ಹನುಮಂತು ವಿನ್ನರ್, ತ್ರಿವಿಕ್ರಮ್ ರನ್ನರ್ ಅಪ್ ಪ್ರಶಸ್ತಿ

Coastal Bulletin
ಬಿಗ್ ಬಾಸ್ ಕನ್ನಡ ಸೀಸನ್ 11: ಹನುಮಂತು ವಿನ್ನರ್, ತ್ರಿವಿಕ್ರಮ್ ರನ್ನರ್ ಅಪ್ ಪ್ರಶಸ್ತಿ

ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತು ಆಗಿದ್ದಾರೆ. ಕಳೆದ 117 ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಬಿಗ್ ಬಾಸ್ ಕೊನೆಗೊಂಡಿದೆ. ಈ ಬಾರಿ ಮೋಕ್ಷಿತಾ ಪೈ, ರಜತ್, ಮಂಜು, ತ್ರಿವಿಕ್ರಂ ಹಾಗೂ ಹನುಮಂತ ಫೈನಲ್ ಕಣದಲ್ಲಿದ್ದರು. ಹನುಮಂತ ಅವರಿಗೆ ಕಪ್ ಒಲಿದಿದೆ.

ರನ್ನರ್ ಅಪ್ ಸ್ಥಾನ ಪಡೆದುಕೊಂಡ ತ್ರಿವಿಕ್ರಮ್

ಸರಳತೆ ಮೂಲಕವೇ ಸೌಂಡು ಮಾಡಿದ್ದ ಹನುಮಂತ ಅವರು ಬಿಗ್​ ಬಾಸ್ ವಿನ್ನರ್ ಪಟ್ಟ ಪಡೆದರು. ತ್ರಿವಿಕ್ರಮ್ ಅವರು ರನ್ನರ್​ ಅಪ್​ ಆಗಿದ್ದಾರೆ.

ಎರಡನೇ ರನ್ನರ್​ ಅಪ್​ ಆದ ರಜತ್

50ನೇ ದಿನಗಳ ಬಳಿಕ ಬಿಗ್​ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಜತ್​ ಎರಡನೇ ರನ್ನರ್​ ಅಪ್​ ಆಗಿ ಮನೆಯಿಂದ ಹೊರಬಂದಿದ್ದಾರೆ. ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿದ್ದರೂ ರಜನ್​​​ ತನ್ನ ನೇರ ನುಡಿಯಿಂದಲೇ ಸಾಕಷ್ಟು ಜನಮನ್ನಣೆ ಗಳಿಸಿದ್ದರು.

ಬಿಗ್‌ ಬಾಸ್‌ ಇತಿಹಾದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದು ಫಿನಾಲೆ ತಲುಪಿದ್ದು

ಇಬ್ಬರೇ ಸ್ಪರ್ಧಿಗಳು. ಒಂದು ರಜತ್‌ ಮತ್ತೊಂದು ಹನುಮಂತ. ಅದರಲ್ಲಿ ಹನುಮಂತ ವಿನ್ನರ್‌ ಕೂಡ ಆಗಿದ್ದು ಬಿಗ್‌ ಬಾಸ್‌ ಕನ್ನಡ ವಿನ್‌ ಆದ ಮೊದಲ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಎಂಬ ದಾಖಲೆ ಬರೆದರು. ಜೊತೆಗೆ 5 ಕೋಟಿಗೂ ಅಧಿಕ ವೋಡ್‌ ಪಡೆದು ಮತ್ತೊಂದು ದಾಖಲೆ ಸೃಷ್ಟಿಸಿದರು.  

ಹನುಮಂತ ಬಿಗ್‌ ಬಾಸ್‌ ವಿನ್ನರ್‌ ಆಗ್ತಿದ್ದಂತೆ ಅವರ ಫ್ಯಾನ್ಸ್‌ ಸಂತಸದಲ್ಲಿ ಸಂಭ್ರಮಿಸಿದ್ದಾರೆ. ಬಿಗ್ ಬಾಸ್ ಬಹುಮಾನ ಮೊತ್ತವಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಕಾನ್ಫಿಡೆಂಟ್‌ ಗ್ರೂಪ್‌ ಕಡೆಯಿಂದ ಹನುಮಂತನಿಗೆ ಕೊಡಲಾಗಿದೆ. ರನ್ನರ್ ಅಪ್​ ಆದ ತ್ರಿವಿಕ್ರಮ್‌ ಅವರಿಗೆ 15 ಲಕ್ಷ ರುಪಾಯಿ ಬಹುಮಾನ ದೊರೆತಿದೆ.

Leave a Comment