ಬಂಟ್ವಾಳ,:ಇಲ್ಲಿನ ಸಮಾಜ ಸೇವಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿರುವ ಈಶ್ವರಮಂಗಲದ ಅಬೂಬಕ್ಕರ್ ಸಿದ್ದೀಕ್ ಸುಮಾರು ರೂಪಾಯಿ 2,11,89,800-00 ಮತ್ತು ರೋಶನಾಬಿ ಶಾಂತಿನಗರ ಬಜಾಲ್ ಇವರು ಸುಮಾರು 26,10,300-00 ಸಹಕಾರಿ ಸಂಘಕ್ಕೆ ವಂಚನೆ ಮಾಡಿ ಸಾಲವನ್ನು ಪಡೆದಿರುತ್ತಾರೆ. ವಂಚನೆಗೈದಿರುವ ಇವರನ್ನು ಕೂಡಲೇ ಬಂಧಿಸಬೇಕು. ಅಬೂಬಕ್ಕರ್ ಸಿದ್ದೀಕ್ ಮತ್ತು ರೋಶನಾಬಿ ಇವರು ಒಂದೇ ತರದ 511 ನಕಲಿ ಬಲೆಗಳನ್ನು ಅಡವಿಟ್ಟು ಸಂಘಕ್ಕೆ ವಂಚಿಸಿದರೂ ಆಡಳಿತ ಮಂಡಳಿಯವರು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಸಂಶಕ್ಕೆ ಎಡೆ ಮಾಡಿದೆ ಎಂದು ಸಮಾಜ ಸೇವಾ ಸಹಕಾರಿ ಮಾಜಿ ನಿರ್ದೇಶಕ ಸದಾಶಿವ ಬಂಗೇರ ತಿಳಿಸಿದ್ದಾರೆ.
ಆಡಳಿತ ಮಂಡಳಿಯ ಕುಮ್ಮಕ್ಕಿನಿಂದ ನಡೆದಿದೆಯೋ? ಎಂಬ ಸತ್ಯವನ್ನು ಸಾರ್ವಜಕರಿಗೆ ತಿಳಿಸಬೇಕು. ಈ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿರುವ ಅಬೂಬಕ್ಕರ್ ಸಿದ್ದಿಕ್ ಈ ಬಲೆಗಳು ನಮ್ಮ ದೇಶದಲ್ಲೇ ತಯಾರಾಗಿದೆಯೋ ಅಥವಾ ವಿದೇಶಿ ನಂಟಿದೆಯೋ? 2,38,800 ರೂಪಾಯಿ ಹಣವನ್ನು ಏನಾದರೂ ಅಪರಾಧ ಚಟುವಟಿಕೆಗಳಿಗೆ ಉಪಯೋಗಿಸಿರುವ ಸಾಧ್ಯತೆಯೂ ಇರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಹಾಗೂ ಕೇಂದ್ರ ತನಿಖಾ ತಂಡ ಎನ್‍ಐಎಗೂ ಮನವಿ ಸಲ್ಲಿಸಲಾಗಿದೆ ಎಂದಿರುವ ಸದಾಶಿವ ಬಂಗೇರ ಅವರು ಈಗಾಗಲೇ ಸಹಕಾರಿ ಸಂಘದ ಸರಪನನ್ನು ಬಂಧಿಸಿದ್ದಾರೆ. ಅದೇ ರೀತಿ ಪ್ರಥಮ ಆರೋಪಿ ಅಬೂಬಕ್ಕರ್ ಸಿದ್ದೀಕ್‍ನನ್ನು ಪೋಲೀಸರು ಬಂಧಿಸಲು ಕಾರ್ಯಪ್ರವೃತ್ತ ರಾಗುತ್ತಿರುವುದ ಮಧ್ಯೆ ಬ್ಯಾಂಕ್ ಆಡಳಿತ ಮಂಡಳಿಯವರು ಹೈಕೋರ್ಟಿನಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿರುವುದರಿಂದ ಅಬೂಬಕ್ಕರ್ ಸಿದ್ದಿಕ್ ಮತ್ತು ಆಡಳಿತ ಮಂಡಳಿಯವರಿಗೆ ಒಳಒಪ್ಪಂದ ಆಗಿದೆಯೇ ಎಂಬ ಬಗ್ಗೆಯೂ ಸಂಶಯ ಮೂಡುತ್ತಿದೆ. ಅಬೂಬಕ್ಕರ್ ಸಿದ್ದೀಕ್‍ನನ್ನು ಬಂಧಿಸಿದರೆ ಎಲ್ಲಾ ಸತ್ಯ ಸಂಗತಿ ಬಯಲಾಗಲಿದೆ .ಸಿಬಿಐ ಮತ್ತು ಇಡಿ ಸಂಸ್ಥೆಯಿಂದ ತಖೆಯಾಗಬೇಕೆಂದು
ಸರಕಾರಕ್ಕೆ ಮನವಿಯನ್ನು ಸಲ್ಲಿಸುತ್ತೇವೆ ಎಂದರು.
ನಮ್ಮ ಆಡಳಿತದ ಅವಧಿಯಲ್ಲಿ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಆಗಿತ್ತು. ಆದರೆ ಈಗಿನ ಆಡಳಿತ ಅವಧಿಯ ಬೇಜವಾಬ್ದಾರಿಯಿಂದ ಸಹಕಾರಿ ಸಂಘವಾಗಿ ಬದಲಾಗಿದೆ. ನಮ್ಮ ಆಡಳಿತ ಅವಧಿಯಲ್ಲಿ ಉದಾಹರಣೆ 2001-02 ರಲ್ಲಿ 17 ಲಕ್ಷ ಹನ್ನೊಂದು ಸಾವಿರ ನಿವ್ಹಳ ಲಾಭದಲ್ಲಿ ಸದಸ್ಯರಿಗೆ ಶೇಕಡಾ 20%, 2002-03ರಲ್ಲಿ 22 ಲಕ್ಷ, 2003-04 ರಲ್ಲಿ 22 ಲಕ್ಷ, 2004-05 ರಲ್ಲಿ 20 ಲಕ್ಷ, ಶೇಕಡಾ 20%, 2010-11ರಲ್ಲಿ 49 ಲಕ್ಷ, 2011-12ರಲ್ಲಿ 64 ಲಕ್ಷ, 2012-13ರಲ್ಲಿ 63 ಲಕ್ಷ, 2013-14ರಲ್ಲಿ 84 ಲಕ್ಷ, 2014-15ರಲ್ಲಿ 1 ಕೋಟಿ 15 ಲಕ್ಷ, ಈ ಸಂದರ್ಭ ಸರಾಸರಿ ಶೇಕಡಾ 19, ಶೇಕಡಾ 20, ಶೇಕಡಾ 21 ರಂತೆ ಡಿವಿಡೆಂಡನ್ನು ಹಂಚಲಾಗಿತ್ತು ಎಂದಿರುವ ಬಂಗೇರ ಅವರು, ಆದರೆ ಈಗಿನ ಆಡಳಿತ ಮಂಡಳಿಯ ಅವಧಿಯಲ್ಲಿ 5 ಕೋಟಿ ಲಾಭ ತೋರಿಸಿ, ಸದಸ್ಯರಿಗೆ ಡಿವಿಡೆಂಡ್ ಮಾತ್ರ ಶೇಕಡಾ 17% ನೀಡಿರುತ್ತಾರೆ ಎಂದರು.
ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆಯನ್ನು ಗಮನಿಸಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸುವ ಮಂದಿಗೆ ಮತ ನೀಡಿ ಕಳಿಸುವಂತೆ ವಿನಂತಿಸಿದ್ದಾರೆ.














