Coastal Bulletin

ಮುಂಬಯಿ :ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸ ಆ್ಯಂಟಿಲಿಯಾ ಸಮೀಪ ಸ್ಫೋಟಕ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಇಂದು ಮುಂಬಯಿಯ ಮಾಜಿ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅವರನ್ನು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ ಅಧಿಕಾರಿಗಳು  ಪ್ರದೀಪ್ ಶರ್ಮಾ ರ ಅಂಧೇರಿಯ ನಿವಾಸದ ಮೇಲೆ ದಾಳಿ ನಡೆಸಿ ಸುಮಾರು ಆರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ನಂತರ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ದಾಳಿ ಹಿನ್ನಲೆಯಲ್ಲಿ ಶರ್ಮಾ ನಿವಾಸವಿರುವ ಇಡೀ

ರಸ್ತೆಯನ್ನು ಬಂದ್ ಮಾಡಿ, ಸುತ್ತಮುತ್ತ ಸಿ ಆರ್ ಪಿ ಎಫ್ ಯೋಧರನ್ನು ನಿಯೋಜಿಸಲಾಗಿದೆ.ಅಂಬಾನಿ ನಿವಾಸ ಅಂಟಿಲೀಯಾ ಬಾಂಬ್ ಪ್ರಕರಣ ಮತ್ತುಮನ್ಸೂಖ್ ಹಿರೆನ್ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ ಎನ್ಕೌಂಟರ್ ಸ್ಪೆಶಲಿಸ್ಟ್  ಪ್ರದೀಪ್ ಶರ್ಮಾ ನಿವಾಸದ ಮೇಲೆ ಎನ್ ಐಎ ಮಿಂಚಿನ ದಾಳಿ ನಡೆಸಿದೆ.

Leave a Comment