ಮಂಗಳೂರು, ಜನವರಿ 21; ಮಂಗಳೂರು ನಗರದಲ್ಲಿ ಮೊದಲ ಬಾರಿಗೆ ಮೆಮು ರೈಲುಗಳು ಸಂಚಾರ ನಡೆಸಲಿವೆ. ಮಂಗಳೂರು ಸೆಂಟ್ರಲ್-ಕಣ್ಣೂರು- ಮಂಗಳೂರು ಸೆಂಟ್ರಲ್ ರೈಲು ಜನವರಿ 26ರಿಂದ ಮೆಮು ರೈಲು ಆಗಿ ಸಂಚಾರ ನಡೆಸಲಿದೆ.
ರೈಲ್ವೆಯ ಒಂದು ಬೋಗಿಯಲ್ಲಿ 55 ಜನರು ಕುಳಿತು ಪ್ರಯಾಣ ಬೆಳೆಸಬಹುದು, 171 ಜನರು ನಿಂತು ಸಂಚಾರ ನಡೆಸಬಹುದಾಗಿದೆ. ಸಾಂಪ್ರದಾಯಿಕ ಬೋಗಿಯಲ್ಲಿ 2,634 ಜನರು ಸಂಚಾರ ನಡೆಸಬಹುದಿತ್ತು. ಈಗ 3603 ಜನರು ಸಂಚಾರ ನಡೆಸಬಹುದಾಗಿದೆ.
ಸ್ಟೀಲ್ ಕೋಚ್‌ಗಳನ್ನು ಹೊಂದಿರುವ ಬೋಗಿಯಲ್ಲಿ ಸ್ಲೈಡಿಂಗ್ ಡೋರ್‌ಗಳು ಹೊಂದಿವೆ. ಬೋಗಿಗಳು ಸಿಸಿಟಿವಿ ಕ್ಯಾಮರಾಗಳ ಜೊತೆ ಎಲ್‌ಇಡಿ ಲೈಟ್ ವ್ಯವಸ್ಥೆಯೂ ಇದೆ.
ರೈಲು ಸಂಖ್ಯೆ 06477 ಕಣ್ಣೂರಿನಿಂದ ಬೆಳಗ್ಗೆ 7.40ಕ್ಕೆ ಹೊರಡಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ 10.55ಕ್ಕೆ ತಲುಪಲಿದೆ. ರೈಲು ನಂಬರ್
06478 ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸಂಜೆ 5.05ಕ್ಕೆ ಹೊರಡಲಿದ್ದು, ಕಣ್ಣೂರಿಗೆ ರಾತ್ರಿ 8.40ಕ್ಕೆ ತಲುಪಲಿದೆ. ಒಟ್ಟು 132 ಕಿ.ಮೀ, 18 ನಿಲ್ದಾಣಗಳು, ಪ್ರಯಾಣದ ಅವಧಿ 3 ಗಂಟೆ 15 ನಿಮಿಷ.
ಕಬಕ ಪುತ್ತೂರು-ಸುಬ್ರಮಣ್ಯ ರಸ್ತೆ ನಡುವಿನ 50 ಕಿ. ಮೀ. ದೂರದ ಪ್ರಯಾಣ ದರವೂ 15 ರೂ. ನಿಂದ 30 ರೂ.ಗೆ ಏರಿಕೆ ಮಾಡಲಾಗಿದೆ. ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣದ ನಡುವಿನ 95 ಕಿ. ಮೀ. ಅಂತದ ಪ್ರಯಾಣ ದರ 30 ರೂ. ನಿಂದ 50 ರೂ.ಗೆ ಏರಿಕೆಯಾಗಿದೆ.














