Coastal Bulletin

ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು, ಕಾರ್ಕಳ ತಾಲೂಕು, ಉಡುಪಿ ಇಲ್ಲಿ ಬಯೋಮೆಟ್ರಿಕ್ ಡೇಟಾ ಎಂಟ್ರಿ ಆಪರೇಟರ್ (Biometric Data Entry Operator/IT/ITeS) ಮತ್ತು ಆಟೋಮೋಟಿವ್ ಸರ್ವಿಸ್ ಟೆಕ್ನೀಷಿಯನ್ ( Automotive Service Technician/Automobile) ಗೆ 6 ತಿಂಗಳ ತರಬೇತಿಗಾಗಿ ಅರ್ಜಿ ಕರೆಯಲಾಗಿದೆ.

ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೋರೇಷನ್ (ಎನ್ಎಸ್ ಡಿಸಿ), ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ವಿದ್ಯಾಭ್ಯಾಸ ನಿಲ್ಲಿಸಿರುವ 15 ರಿಂದ 29 ವರ್ಷದೊಳಗಿನವರಿಗೆ

ಕೌಶಲ್ಯ ತರಬೇತಿ ನೀಡಲು ಅರ್ಜಿ ಅಹ್ವಾನಿಸಲಾಗಿದೆ. ಈ ತರಬೇತಿಗೆ ಸೇರಲಿಚ್ಚಿಸುವ ಅಭ್ಯರ್ಥಿಗಳು ಸಂಸ್ಥೆಗೆ ಬಂದು ಅರ್ಜಿಯನ್ನು ಪಡೆಯಬಹುದು. ದಾಖಲಾತಿ ಈಗಾಗಲೆ ಪ್ರಾರಂಭಗೊಂಡಿದೆ. ಸ್ಥಳೀಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.

Leave a Comment