Coastal Bulletin

ಮಂಗಳೂರು : ಮಂಗಳೂರಿನಲ್ಲಿ ವ್ಯಕ್ತಿಯೋರ್ವನಿಗೆ ಕಂತೆ ಕಂತೆ ನೋಟುಗಳಿರುವ ಬಾಕ್ಸ್ ಸಿಕ್ಕಿರುವ ಬಗ್ಗೆ ವರದಿಯಾಗಿದೆ.ಆ ವ್ಯಕ್ತಿ ಹಣದ ಬಾಕ್ಸ್ ಕಂಡು ಮೈಮರೆತು ತಾನು ಕಂಠ ಪೂರ್ತಿ ಕುಡಿದು ಬಳಿಕ ಜೊತೆಗಿದ್ದವರಿಗೂ ಕುಡಿಯಲು ಹಣ ಕೊಟ್ಟಿದ್ದಾರೆಂದು ವರದಿಯಾಗಿದೆ.

ಶಿವರಾಜ ಎಂಬುವರಿಗೆ ಕಳೆದು ತಿಂಗಳು ನವೆಂಬರ್​ 27ರಂದು ನಗರದ ಪಂಪ್​ವೆಲ್ ಬಾರ್​ ಬಳಿ ಕಂತೆ ಕಂತೆ ಹಣ ಇರುವ ಬಾಕ್ಸ್ ಸಿಕ್ಕಿದೆ. ಬಾಕ್ಸ್​ನಲ್ಲಿ ​ 500, 2,000 ರೂ.ಮುಖ ಬೆಲೆಯ ನೋಟುಗಳಿತ್ತು ಎನ್ನಲಾಗಿದೆ.

ವಿಷಯ ತಿಳಿದು ಕಂಕನಾಡಿ ಪೊಲೀಸರು ಹಣದ ಬಾಕ್ಸ್​ ಸಮೇತ ಶಿವರಾಜ್​ನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಮೂರು ದಿನಗಳ ಕಾಲ

ಠಾಣೆಯಲ್ಲಿ ಇಟ್ಟುಕೊಂಡು ಬಿಟ್ಟು ಕಳಿಸಿದ್ದಾರೆ.

ಪೊಲೀಸರು ಬಾಕ್ಸ್ ನಲ್ಲಿ 49 ಸಾವಿರ ರೂ ಮಾತ್ರ ಇತ್ತು ಎಂದು ತಿಳಿಸಿದ್ದಾರೆ. ಆದರೆ ಶಿವರಾಜ್​​ ಬಾಕ್ಸ್​ನಲ್ಲಿ 5ರಿಂದ 10 ಲಕ್ಷ ಇತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ.

ಆದರೆ, ಒಂದು ವಾರ ಕಳೆದರೂ ಹಣದ ನಮ್ಮದು ಎಂದು ಯಾರೂ ಬಂದಿಲ್ಲ, ಹಣ ಕಳೆದುಕೊಂಡ ಬಗ್ಗೆ ದೂರು ಕೊಟ್ಟಿಲ್ಲ ಎನ್ನಲಾಗಿದೆ.

Leave a Comment